ರವಿವಾರ ಉಡುಪಿಯಲ್ಲಿ ಸಾವಯವ ಸಂತೆ

Update: 2017-10-10 17:13 GMT

ಉಡುಪಿ, ಅ.10: ಜಿಲ್ಲಾಡಳಿತ, ಜಿಲ್ಲಾ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಉಡುಪಿ, ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಮಂಗಳೂರು ಇವುಗಳ ಸಹಯೋಗದಲ್ಲಿ ಸಾವಯವ ಸಂತೆಯ ಉದ್ಘಾಟನಾ ಕಾರ್ಯಕ್ರಮ ಅ.15ರಂದು ರವಿವಾರ ದೊಡ್ಡಣಗುಡ್ಡೆಯಲ್ಲಿರುವ ರೈ  ಸೇವಾ ಕೇಂದ್ರದಲ್ಲಿ ನಡೆಯಲಿದೆ.

   

ಸಾವಯವ ಸಂತೆಯಲ್ಲಿ ನೋಂದಾಯಿತ ಸಾವಯವ ರೈತರು ಪಾಲ್ಗೊಳ್ಳ ಲಿದ್ದು, ರೈತರಿಂದ ನೇರ ಗ್ರಾಹಕರಿಗಾಗಿ ಎಂಬ ಉದ್ದೇಶವನ್ನು ಹೊಂದಿದೆ. ಇಲ್ಲಿ ಯಾವುದೇ ಮದ್ಯವರ್ತಿಗಳ ಮದ್ಯಪ್ರವೇಶ ಇರುವುದಿಲ್ಲ.

ಸಾವಯವ ಅಕ್ಕಿ, ಸಿರಿಧಾನ್ಯಗಳು, ಹಣ್ಣುಗಳು, ಸಾಂಬಾರ ಪದಾರ್ಥಗಳು, ಇತರ ಉತ್ಪನ್ನ ಗಳು ಈ ಸಂತೆಯಲ್ಲಿ ಲಭ್ಯವಿದ್ದು, ಇಲಾಖೆ ವತಿಯಿಂದ ಲ್ಯವಿರುವ ಗಿಡ ಗಳನ್ನು ಮಾರಾಟ ಮಾಡಲಾಗುತ್ತದೆ ಈ ಸಂತೆಯಲ್ಲಿ ಸುಮಾರು 300 ಜನ ಪಾಲ್ಗೊಳ್ಳಲ್ಲಿದ್ದಾರೆ. ಮುಂದೆ ಪ್ರತಿ ರವಿವಾರ ಈ ಸಂತೆ ನಡೆಯಲಿದೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಸಾವಯವ ಸಂತೆ ಉದ್ಘಾಟಿಸಲಿದ್ದು, ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News