​ಅ.13,14: ಕನ್ನಡಿಗರ ಸಮಾವೇಶ, ಜಾನಪದ ಸಂಭ್ರಮ

Update: 2017-10-11 14:09 GMT

ಮಂಗಳೂರು, ಅ.11: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡಿಗರ ಸಮಾವೇಶ, ಜಾನಪದ ಸಂಭ್ರಮ ಅ.13 ಹಾಗೂ 14ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಕರವೇ ದ.ಕ ಜಿಲ್ಲಾಧ್ಯಕ್ಷ ಅನಿಲ್‌ದಾಸ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂದರ್ಭ ಜಗಜ್ಯೋತಿ ಶ್ರೀ ಬಸವೇಶ್ವರ ಹೆಸರಿನ ಪ್ರಶಸ್ತಿಯನ್ನು ತಿಪಟೂರಿನ ಡಾ. ಅಬ್ದುಲ್ ಹಮೀದ್, ರಸಋಷಿ ರಾಷ್ಟ್ರಕವಿ ಕುವೆಂಪು ಹೆಸರಿನ ಪ್ರಶಸ್ತಿಯನ್ನು ತೀರ್ಥಹಳ್ಳಿಯ ಡಾ. ಹಂಪ ನಾಗರಾಜಯ್ಯ, ಶಾಂತವೇರಿ ಗೋಪಾಲಗೌಡರ ಹೆಸರಿನ ಪ್ರಶಸ್ತಿಯನ್ನು ಗದಗದ ಎಸ್.ಎಸ್. ಪಾಟೀಲ್, ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು ಬೆಂಗಳೂರಿನ ಎಸ್. ಶಿವರಾಮ್ ಅವರಿಗೆ, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಹೆಸರಿನ ಪ್ರಶಸ್ತಿಯನ್ನು ಮಂಡ್ಯದ ಕೆ.ಎಸ್. ಪುಟ್ಟಣ್ಣಯ್ಯ, ಡಾ. ಎಸ್.ಕೆ. ಕರಿಂ ಖಾನ್ ಪ್ರಶಸ್ತಿಯನ್ನು ಬೆಳಗಾವಿಯ ರಾಧಾಬಾಯಿ ಅವರಿಗೆ ಹಾಗೂ ಕೆ. ಶ್ಯಾಮರಾಮ್ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರಿಗೆ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕರವೇ ಅರುಣ್ ಕುಮಾರ್, ಲತಾಶ್ರೀ ಸಾಲ್ಯಾನ್, ಮುಹಮ್ಮದ್ ರಝಾಕ್, ಮಧುಸೂಧನ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News