ಶಾಸಕ ಜೆ.ಆರ್. ಲೋಬೊ ಸ್ಥಳ ಪರಿಶೀಲನೆ

Update: 2017-10-11 14:13 GMT

ಮಂಗಳೂರು, ಅ.11: ಕುಲಶೇಖರದಿಂದ ಬೈತುರ್ಲಿಯವರೆಗಿನ ಹೆದ್ದಾರಿಯ ಬಗ್ಗೆ ಸ್ಥಳೀಯರ ಅಹವಾಲುಗಳ ಹಿನ್ನಲೆಯಲ್ಲಿ ಶಾಸಕ ಜೆ.ಆರ್.ಲೋಬೊ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಶಾಸಕರು ರಸ್ತೆ ಅಲ್ಮೈನ್‌ಮೆಂಟ್ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ ಆಕ್ಷೇಪಗಳ ಬಗ್ಗೆ ವಿವರಿಸಿದರು. ಈ ಎಲ್ಲ ಆಕ್ಷೇಪಗಳನ್ನು ಪರಿಶೀಲಿಸಿ ಜನರಿಗೆ ವಿರುದ್ಧವಾಗಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಶಾಸಕರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News