ರೂರಲ್ ಐಟಿ ಕ್ವಿರ್; ಶಮ್ಸ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Update: 2017-10-11 15:56 GMT

ಭಟ್ಕಳ, ಅ. 11: ಟಾಟಾ ಕನ್ಸಲ್ಟೆನ್ಸಿ ಪ್ರಾಯೋಜಕತ್ವದಲ್ಲಿ ಧಾರವಾಡದ ಡಾ.ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಮಂಗಳವಾರ ನಡೆದ ಬೆಳಗಾವಿ ವಿಭಾಗೀಯ ಮಟ್ಟದ ರೂರಲ್ ಐಟಿ ಕ್ವಿರ್ ಸ್ಪರ್ಧೆಯಲ್ಲಿ ಭಟ್ಕಳದ ನ್ಯೂಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ರಾಜ್ಯಮಟ್ಟದ ರೂರಲ್ ಐ.ಟಿ. ಕ್ವಿರ್ ಸ್ಪರ್ಧೆಗೆ ಆರ್ಹತೆಯನ್ನು ಪಡೆದುಕೊಂಡಿದ್ದಾರೆ.

ಅ.13ರಂದು ತುಮಕೂರಿನಲ್ಲಿ ಜರಗುವ ಐಟಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಅಮಾನುಲ್ಲಾ ದೊಣ್ಣ, ಫರ್ಹಾನ್ ಅಕ್ರಮಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ವಿಭಾಗದ 555 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು 6 ತಂಡಗಳು ಅಂತಿಮ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದವು. ಅದರಲ್ಲಿ ಭಟ್ಕಳದ ಆನಂದಾಶ್ರಮ ಪಿಯು ಕಾಲೇಜ್, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನ್ಯೂ ಶಮ್ಸ್ ಸ್ಕೂಲ್ ನ ತಂಡಗಳೂ ಆರ್ಹತೆಯನ್ನು ಪಡೆದುಕೊಂಡಿದ್ದು ಅಂತಿಮಾ ಸುತ್ತಿನಲ್ಲಿ ಆನಂದಾಶ್ರಮ ಪಿಯು ಕಾಲೇಜ್ ಹಾಗೂ ನ್ಯೂ ಶಮ್ಸ್ ಸ್ಕೂಲ್ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News