ಪುರಸಭೆ ಸಾಮಾನ್ಯ ಸಭೆ: ಡಿಸಿ, ಪಿಡಿ ವಿರುದ್ದ ಸದಸ್ಯರು ಗರಂ

Update: 2017-10-11 17:01 GMT

ಕಾರ್ಕಳ, ಅ. 11: ಉಡುಪಿ ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕರು ಅಸಮರ್ಪಕ ಕಾರ್ಯನಿರ್ವಹಣೆಯಿಂದ ಕಾರ್ಕಳ ಪುರಸಭೆಯ ಅಭಿವದ್ದಿ ಕುಂಠಿತವಾಗಿದೆ, ಎಲ್ಲಾ ನಗರಗಳು ಉತ್ತಮ ಅಭಿವೃದ್ದಿಯನ್ನು ಕಂಡರೆ ಕಾರ್ಕಳ ಪುರಸಭೆ ಮಾತ್ರ ಏಳಿಗೆ ಕಂಡಿಲ್ಲ ಇದಕ್ಕೆ ನಮ್ಮ ಅಧಿಕಾರಿಗಳ ಬೇಜ್ದಾರಿ ಕಾರಣ ಎಂದು ಸದಸ್ಯ ಮೊಹಮ್ಮದ್ ಶರೀಫ್ ಅಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಸಮಸ್ಯೆಗೆ ಆದ್ಯತೆ ನೀಡಿ ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಸಮಸ್ಯೆಗಳು ತಲೆ ದೋರುತ್ತಿದ್ದು ಈ ಸಮಸ್ಯೆಗಳತ್ತ ಚಿಂತೆ ಮಾಡಿ ಅದಕ್ಕೆ ಪರಿಹಾರವನ್ನು ಸೂಚಿಸಿ ಎಂದು ಹೇಳಿದ್ದಾರೆ. ಅಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ ರಾತ್ರೋರಾತ್ರೋ ಕಾಮಗಾರಿಗಳನ್ನು ನಡೆಸಿ ಅವರಿಗೆ ಬೇಕಾದ ರೀತಿಯಲ್ಲಿ ಖಾಸಗಿ ವ್ಯಕ್ತಿಗಳು ಚರಂಡಿಯನ್ನು ನಿರ್ಮಿಸಿ ಉಳಿದವರಿಗೆ ತೊಂದರೆ ನೀಡುತ್ತಿದ್ದಾರೆ ಇದಕ್ಕೆ ಪುರಸಭೆ ಅಧಿಕಾರಿಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಏಳು ಅಡಿಗಳನ್ನು ಬಿಟ್ಟು ಕೊಡುವುದಾಗಿ ಹೇಳಿ ಕೆಲವರು ಒಂದು ಅಡಿನ ಜಾಗವನ್ನು ಬಿಟ್ಟುಕೊಡದೇ ಇದೀಗ ಅಂಗಡಿಯ ಮಾಡುಗಳು ರಸ್ತೆಗೆ ಬಂದಿದೆ. ಇದು ಅಬಿವದ್ದಿಯೇ..? ಎಂದು ಪ್ರಶ್ನಿಸಿದರು.

ಅಲ್ಲದೆ ಹವಾಲ್ದಾರ್‌ಬೆಟ್ಟು, ಕಾಬೆಟ್ಟು, ಶಿವತಿಕೆರೆ ಬಳಿಯಿರುವ ದಲಿತ ಕುಟುಂಬಗಳು ವಾಸಮಾಡುತ್ತಿದ್ದು ಒಳಚರಂಡಿ ಅವ್ಯವಸ್ಥೆಯಿಂದ ನೊಂದಿದ್ದಾರೆ ಅವರ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಸೂಚಿಸುವ ಕೆಲಸ ಕೂಡಾ ಈ ಮೇಲಾಧಿಕಾರಿಗಳು ಮಾಡಿಲ್ಲ. ಹಾಗಾದರೆ ದಲಿತರಿಗೆ ಬದುಕುವ ಹಕ್ಕಿಲ್ಲವೇ ? ಎಂದು ಪ್ರಶ್ನಿಸಿದರು.

ಸದಸ್ಯರಾದ ನಳಿನಿ ಆಚಾರ್ಯ, ರೆಹಮತ್ ಮತ್ತು ಶಾಂತಿ ಶೆಟ್ಟಿ ಮಾತನಾಡಿ, ಅವರ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ ಎಂದು ಆಗ್ರಹಿಸಿದರು. ಯೋಗೀಶ್ ದೇವಾಡಿಗ ಮಾತನಾಡಿ, ಸೊಳ್ಳೆಗಳಿಂದ ವಾಸಕ್ಕೆ ಈ ಪರಿಸರ ಅಯೋಗ್ಯವಾಗಿದೆ ಎಂದು ದೂರಿದರು.

ಬಂಗ್ಲೆಗುಡ್ಡೆಯಲ್ಲಿ ನೀರು ಪೂರೈಕೆ ಮಾಡುವ ಸಿಬ್ಬಂದಿ ಕೆಲಸದ ಸಮಯದಲ್ಲಿ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಕುಡಿದು ಬೀಳುತ್ತಿದ್ದಾನೆ. ಈಂತಹ ಸಿಬ್ಬಂದಿ ನಮ್ಮಗೆ ಬೇಕಾ..? ಆತನ ವಿರುದ್ದ ಕ್ರಮ ಯಾಕೆ ಕೈಗೊಂಡಿಲ್ಲ ? ಎಂದು ಮೊಹಮ್ಮದ್ ಶರೀಫ್ ದೂರಿದರು. ಈ ಬಗ್ಗೆ ಸೂಕ್ತ ಉತ್ತರ ಬೇಕು ಎಂದು ಯೋಗೀಶ್ ದೇವಾಡಿಗ ಮತ್ತು ಎಸ್.ಪಾರ್ಶ್ವನಾಥ ವರ್ಮ ಒತ್ತಾಯಿಸಿದರು.

ಅಶ್ಪಕ್ ಅಹ್ಮದ್ ಮಾತನಾಡಿ, ಆತನನ್ನು ನನ್ನ ವಾರ್ಡ್‌ಗೆ ಕಳುಹಿಸಿ ಕೊಡಿ. ನಾನು ಕೆಲಸ ಮಾಡಿಸುತ್ತೇನೆ ಎಂದರು. ಈ ನಡುವೆ ಮೊಹಮ್ಮದ್ ಶರೀಫ್ ತನ್ನ ಪಾದರಕ್ಷೆಯನ್ನು ಕಳಚಿ ನನ್ನ ಚಪ್ಪಲಿಯಿಂದ ನನಗೆ ಅಧಿಕಾರಿಗಳು ಹೊಡೆಯಲಿ ಎಂದು ಪಾದರಕ್ಷೆ ಹಿಡಿದು ಸಭೆಯಲ್ಲಿ ಅಸಬ್ಯ ರೀತಿಯಲ್ಲಿ ವರ್ತಿಸಿದ್ದಾರೆ ಎನ್ನಲಾಗಿದೆ. ಸುಭಿತ್ ಎನ್.ಆರ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ರಜೆ ಹಾಕಿದ್ದ ದಿನಗೂಲಿ ನೌಕರರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪ್ರಕಾಶ್ ರಾವ್ ಮಾತನಾಡಿ, ಪುರಸಭೆಯ ರಸ್ತೆಯ ಇಕ್ಕೆಲದಲ್ಲಿ ಕಳೆಗಳು ಪೊದೆಯಂತೆ ಬೆಳೆದು ಹೊಗಿದ್ದು ಅದನ್ನು ತೆರವು ಮಾಡುವ ಕೆಲಸ ಅಗುತ್ತಿಲ್ಲ ಸಾರ್ವಜನಿಕರು ಮಾತಾಡಿಕೊಳ್ಳತ್ತಿದ್ದಾರೆ. ಆರೋಗ್ಯಕಾರಿಗಳು ಉತ್ತರಿಸಲಿ ಎಂದಾಗ ಆರೋಗ್ಯ ಪರಿವೀಕ್ಷಕಿ ಲೈಲಾ ಥೋಮಸ್ ಮಾತನಾಡಿ, ನನ್ನಲ್ಲಿ ಸಿಬ್ಬಂದಿ ಕೊರತೆಯಿದೆ. ಎಲ್ಲ ಸಿಬ್ಬಂದಿಗಳು ಕಚೇರಿಯಲ್ಲಿದ್ದಾರೆ. ನಾನು ಕೈಯಿಂದ ಹಣ ಕೊಟ್ಟು ಸಿಬ್ವಂದಿಗಳನ್ನು ಹಾಕಿ ದುಡಿಸಿಕೊಳ್ಳವಷ್ಟು ನನಗೆ ಅಗತ್ಯ ಇಲ್ಲ. ಪುರಸಭೆ ಪ್ರಕಾರ ನನ್ನಲ್ಲಿರುವ 13 ಜನ ಸಿಬ್ಬಂದಿಗಳನ್ನು ನನಗೆ ಕೊಡಿ ಎಂದರು. ಸದಸ್ಯೆ ಲಲಿತಾ ಭಟ್ ಮತನಾಡಿ ಅಳವಡಿಸಿದ ವಿದ್ಯುತ್ ದೀಪಗಳು ಹತ್ತೇ ದಿನದಲ್ಲಿ ಬಿದ್ದು ಹೋಗಿದೆ ಎಂತ ಕೆಲಸಗಳನ್ನು ಮಾಡುತ್ತಿದ್ದೀರಿ ಎಂದು ಹೇಳಿದಾಗ ಯೋಗಿಶ್ ದೇವಾಡಿಗ ಮಾತನಾಡಿ ದಾರಿ ದೀಪಗಳನ್ನು ಸರಿಪಡಿಸಿ ಇಲ್ಲವಾದಲ್ಲಿ ಮುಂದಿನ ದೀಪಾವಳಿಗೆ ಅವುಗಳಿಗೆ ಗೋಡುದೀಪವನ್ನು ಅಳವಡಿಸಿ ಎಂದು ವ್ಯಂಗವಾಗಿ ಹೇಳಿದರು.

 ಪ್ರಿಯಾ ರಾಜೇಂದ್ರ ಮಾತನಾಡಿ, 2ನೇ ವಾರ್ಡ್‌ನಲ್ಲಿ ಪೈಪ್‌ಲೈನ್ ಕಟ್ಟಾಗಿರುವ ಕುರಿತು ಗಮನ ಸೆಳೆದರು. ಪ್ರತಿಮಾ ಮೋಹನ್ ಮತ್ತು ಶಶಿಕಲ ರಾಣೆ ದೇವಳದ ಅಭಿವದ್ದಿಗೆ ಸಹಕರಿಸುವಂತೆ ವಿನಂತಿಸಿದರು. ಪ್ರತಿಮಾ ಮೋಹನ್ ಸಮಾಜ ಮಂದಿರದ ಪೀಠೋಪಕರಣಕ್ಕೆ ಸಹಾಯಧನ ನೀಡುವಂತೆ ಮನವಿ ಮಾಡಿದರು.

ಪುರಸಭಾ ವ್ಯಾಪ್ತಿಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದರು ಕಾಯುತ್ತಲೇ ಇದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ಅವರು ಕಾಯುತ್ತಲೇ ಇದ್ದರೂ ಅವರಿಗೆ ನಿವೇಶನ ಕೊಡುವ ಕೆಲಸವನ್ನು ಪುರಸಭೆ ಮಾಡುತ್ತಿಲ್ಲ ಇನ್ನಾದರೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪುರಸಭೆ ಗಮನ ಹರಿಸಲಿ ಎಂದು ಸದಸ್ಯ ಅಶ್ಪಕ್ ಅಹಮ್ಮದ್ ಹೇಳಿದರು.

ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಮುಖ್ಯಾಕಾರಿ ಮೇಬಲ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.

ಮಾರಿಯಮ್ಮನಿಗೆ ತೆಂಗಿನ ಕಾಯಿ ಅರ್ಪಣೆ

ಕಳೆದ ಮಾಸಿಕ ಸಭೆಯಲ್ಲಿ ದಿನಗೂಲಿ ನೌಕರನೊಬ್ಬ ನಾನು ಅಧ್ಯಕ್ಷರಿಗೆ ಕಮಿಷನ್ ಕೊಡಬೇಕು ಎಂದು ಸಭೆಯಲ್ಲಿ ಬಂದು ಹೇಳಿದ್ದ ನಾನು ಕಮಿಷನ್ ಕೊಡಬೇಕು ಎಂದು ಎಲ್ಲೂ ಯಾರತ್ರನೂ ಹೇಳಿಲ್ಲ ವಿನಕಾರನ ಅಪವಾದವನ್ನು ಹೋರಿಸುತ್ತಿದ್ದಾರೆ. ನಾನು ತಪ್ಪ ಮಾಡಿಲ್ಲ ಮಾಡಿದ್ದೇ ಅದಲ್ಲಿ ಮಾರಿಯಮ್ಮ ನನ್ನನ್ನು ಶಿಕ್ಷಿಸಲಿ, ಎಂದು ಹೇಳಿ ತಾನು ತಂದಿದ್ದ ತೆಂಗಿನ ಕಾಯಿಯನ್ನು ಸಭೆಗೆ ತೋರಿಸಿ ಅಲ್ಲಿಂದ ಮಾರಿಗುಡಿಗೆ ಸಾಗಿ ದೇವರ ಗುಡಿ ಮುಂದೆ ತೆಂಗಿನ ಕಾಯಿಯನ್ನು ಒಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News