ತುಳು ಮಾತನಾಡಲು ತರಬೇತಿ: ಅ.13ರಂದು ಚಾಲನೆ
Update: 2017-10-11 23:13 IST
ಮಂಗಳೂರು, ಅ.11: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಬಲೇ ತುಳು ಕಲ್ಪುಗ’ ಯೋಜನೆಯಡಿ ತುಳು ಬಾರದವರಿಗೆ ತುಳು ಮಾತನಾಡಲು ಕಲಿಸುವ ಸಲುವಾಗಿ ಅ.13 ರಂದು ಸಂಜೆ 4 ಗಂಟೆಗೆ ಅಕಾಡೆಮಿಯ ‘ಸಿರಿಚಾವಡಿ’ಯಲ್ಲಿ ತುಳು ತರಗತಿಯ ಉದ್ಘಾಟನಾ ಸಮಾರಂಭ ಜರಗಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು, ಶಾಸಕ ಜೆ. ಆರ್. ಲೋಬೋ ತುಳು ತರಗತಿಯನ್ನು ಉದ್ಘಾಟಿಸಲಿದ್ದಾರೆ. ತುಳು ಮಾತನಾಡಲು ಕಲಿಯಲಿಚ್ಛಿಸುವ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಅವಕಾಶದ ಸದುಪಯೋಗ ಪಡೆಯಬಹುದು.
ಆಸಕ್ತರು ಅಕಾಡೆಮಿಯ ಮೊಬೈಲ್ ಸಂಖ್ಯೆ: 9901016962 ಗೆ ಮೆಸೇಜ್ ಮೂಲಕ ಅಥವಾ ಅರ್ಜಿಗಳ ಮೂಲಕ ಅಕಾಡೆಮಿಯಲ್ಲಿ ಹೆಸರು ನೊಂದಾಯಿಸಿ ಕೊಳ್ಳುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಅವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.