ಭಟ್ಕಳ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಮನವಿ

Update: 2017-10-12 15:26 GMT

ಭಟ್ಕಳ, ಅ. 12: ಐ.ಸಿ.ಡಿ.ಎಸ್ ಅಸ್ಥಿರಗೊಳಿಸುವ ಹುನ್ನಾರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಹಾಗೂ ಪ್ಯಾಕೇಟ್ ಫುಡ್ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಿ.ಐ.ಟಿ.ಯು ವತಿಯಿಂದ ಗುರುವಾರ ಸಹಾಯಕ ಆಯುಕ್ತರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಯನ್ನು ಅರ್ಪಿಸಿತು.

ಕೇಂದ್ರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೆನಕಾ ಗಾಂಧಿ ಇತ್ತಿಚೆಗೆ ದೇಶದಲ್ಲಿ ಅಪೌಷ್ಟಿಕತೆ ಅತಿ ಹೆಚ್ಚು ಇರುವ 130 ಜಿಲ್ಲೆಗಳ ಅಧಿಕಾರಗಳ ಸಮ್ಮೇಳನವೊಂದರಲ್ಲಿ ಮಾತನಾಡಿ, ಪೂರಕ ಪೋಷಕಾಂಶಗಳನ್ನು ಬಿಸಿ ಮತ್ತು ಬೇಯಿಸಿದ ಅಥವ ಮನೆಗೆ ಒಯ್ಯುವ ರೇಷನ್ ಬದಲು ಒಣ ಮಿಶ್ರಣ ದೊಂದಿಗೆ ಪೋಷಕಾಂಶ ಪ್ಯಾಕೇಟ್‌ಗಳಲ್ಲಿ ಪೂರೈಸಲಾಗುವುದು ಎಂದು ಹೇಳಿದ್ದು ಆತಂಕಕಾರಿ ವಿಷಯ. ಇದನ್ನು ಪ್ರಯೋಗಿಕವಾಗಿ ದೇಶದ 300 ಜಿಲ್ಲೆಗಳಲ್ಲಿ ಆರಂಭಿಸಲು ಹೇಳಲಾಗಿದೆ. ಈ ರೀತಿಯ ಹೇಳಿಕೆಯಿಂದ ಐ.ಸಿ.ಡಿ.ಎಸ್. ನ್ನು ಅಸ್ಥಿತಗೊಳಿಸಲು ಮತ್ತು ಈಗ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಫಲಾನುಭವಿಗಳಿಗೆ ಕೊಡುವ ಟಿ.ಎಚ್.ಆರ್ ನಲ್ಲಿ ಮೀಸಲಿಟ್ಟ ಹಣವನ್ನು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಿದಲ್ಲಿ ಇದೇ ಹಣಕ್ಕೆ ಯಾವುದೇ ಪೂರಕ ಪೌಷ್ಟಿಕ ಆಹಾರ ಮುಕ್ತ ಮಾರುಕಟ್ಟೆಯಲ್ಲಿ ಸಿಗದಂತೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಇದು ಖಂಡನೀಯಾ ವಾಗಿದ್ದು ಈ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿ.ಐ.ಟಿ.ಯು ಸಂಯೋಜಿತ ವಾಗಿ ನೀಡಿದ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

1975ರಿಂದ ಆರಂಭವಾದ ಐ.ಸಿ.ಡಿ.ಎಸ್. ನಲ್ಲಿ ಮಕ್ಕಳು ಗಭೀಣಿ ಮತ್ತು ಎದೆಹಾಲು ಉಣಿಸುವ ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಎದುರಿಸುವಲ್ಲಿ ನೆರವಾಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಅಸಂಘಟಿವಾಗಿ ದುಡಿಯುವ ಮಹಿಳೆಯರಿಗೆ ಅವರ ಮನೆ ಬಾಗಿಲಿಲ್ಲಿ ಸಿಗುವ ಅತ್ಯುತ್ತಮ ಶಿಕ್ಷಣ ಮತ್ತು ಆಟದ ಶಾಲೆಯಾಗಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕಿ ಡಾ.ಸ್ವಾಮಿನಾಥನ್ ಮತ್ತಿತರರ ವಿಶೇಷಜ್ಞರು ಬೇಯಿಸಿದ ಆಹಾರವೇ ಎಂದಿಂದಿಗೂ ಪ್ಯಾಂಕ್ ಮಾಡಿದ ಆಹಾರಕ್ಕಿಂತ ಆರೋಗ್ಯಕರ ಎಂದಿದ್ದಾರೆ. ಆದ್ದರಿಂದ ದೇಶದ ಎಲ್ಲ ಅಂಗನವಾಡಿ ನೌಕರರ ಹಿತದೃಷ್ಟಿಯಿಂದ ಈ ಕೂಡಲೇ ಇಂತಹ ಅವೈಜ್ಞಾನಿಕ ಸಮುದಾಯದ ಹಿತಕ್ಕೆ ಮಾರಕವಾಗಿರುವ ಮತ್ತು ಬಡ ಅಂಗನವಾಡಿ ನೌಕರರ ವಿರುದ್ಧವಾದ ಯೋಜನೆಯನ್ನು ಕೈಬಿಟ್ಟು ಎಲ್ಲ 25 ಲಕ್ಷ ಅಂಗನವಾಡಿ ನೌಕರರನ್ನು ಖಾಯಂ ಮಾಡಿ, ಕನಿಷ್ಠ ಕೂಲಿ ನಿಡಿ, ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಪಾಸ್ಸಿನಂತೆ ಇವರನ್ನು ಕಾರ್ಮಿಕರೆಂದು ಪರಿಗಣಿಸಿ, ಸೇವಾ ಭದ್ರತೆ ನೀಡಿ, ಸಾಮಾಜಿಕ ಸುರಕ್ಷೆಗಳನ್ನು ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ಸಂಯೋಜಿತ ಉತ್ತರಕನ್ನಡ ಜಿಲ್ಲಾ ಸಮಿತಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಮುಖಂಡರಾದ ಪುಷ್ಪಾವತಿ ನಾಯ್ಕ, ಶಾಂತಿ ಮೊಗೇರ್, ಜಯಲಕ್ಷ್ಮಿ ನಾಯ್ಕ, ಕವಿತಾ ನಾಯ್ಕ, ಸುಧಾಭಟ್ ಪದ್ಮಾನಾಯ್ಕ, ಸುಭಾಷ್ ಕೊಪ್ಪಿಕರ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News