ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೆಪ್ ಮಾರ್ಗದರ್ಶನ

Update: 2017-10-12 17:02 GMT

ಮಂಗಳೂರು, ಅ. 12: ಉದ್ಯಮರಂಗದತ್ತ ಮುಖ ಮಾಡಿರುವ ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸಹಭಾಗಿತ್ವದ ಕುರಿತಾದ ಪರಿವರ್ತನೆಯ ಹೊಸ ಎತ್ತರಗಳಿಗೆ ಸಂಬಂಧಿಸಿ ತಜ್ಞರ ಸಹಯೋಗದಲ್ಲಿ ಒಂದು ದಿನದ ಸ್ಟೆಪ್ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ  ನಡೆಯಿತು.

ಬೆಂಗಳೂರಿನ ಐಇಇಇ, ಯಂಗ್ ಪ್ರೊಫೆಶನಲ್ಸ್ ಎಫಿನಿಟಿ ಗ್ರೂಫ್ ವತಿಯಿಂದ ಕಾಲೇಜಿನ ಐಇಇಇ ವಿದ್ಯಾರ್ಥಿ ಘಟಕವು ಆಯೋಜಿಸಿದ್ದ ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 138ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು ಪಾಲ್ಗೊಂಡಿದ್ದರು.

ಹ್ಯಾಕರ್ ಅರ್ತ್‌ನ ಇಂಟರ್ ನ್ಯಾಶನಲ್ ಸೇಲ್ಸ್ ಮುಖ್ಯಸ್ಥ ಶಿಶಿರ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಂತ್ರಿಕ ವಲಯದಲ್ಲಿ ಕನಸಿನ ಅವಕಾಶಗಳನ್ನು ಬಾಚಿಕೊಳ್ಳುವ ಮತ್ತು ಸಾಧಕರಾಗಿ ಬೆಳೆಯುವ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.

ಬೆಂಗಳೂರಿನ ಯಂಗ್ ಪ್ರೊಫೆಶನಲ್ಸ್ ಅಧ್ಯಕ್ಷ ಡಾ.ಅಭಿಷೇಕ್ ಅಪ್ಪಾಜಿ ಸ್ಪರ್ಧಾತ್ಮಕತೆ ಮತ್ತು ಉದ್ಯಮಶೀಲತಾ ಕೌಶಲಗಳ ಕುರಿತು ಚರ್ಚಿಸಿದರು.
ಮಂಗಳೂರಿನ ಕನ್ಸಲ್ಟೆಂಟ್ ಅನಿಲ್ ಹೆಗ್ಡೆ ತಾಂತ್ರಿಕ ವಲಯದಲ್ಲಿ ಸವಾಲುಗಳನ್ನು ಎದುರಿಸುವ ಕಠಿಣತೆಯ ಬಗ್ಗೆ ಮಾತನಾಡಿದರು. ಒಮ್ನಿಸೆಸ್ ಇಂಡಿಯಾದ ನಿರ್ದೇಶಕ ಅತುಲ್ ಕುಡ್ವಾ ಉದ್ಯಮದ ಆಯ್ಕೆ ಮತ್ತು ಸರಿಯಾದ ನಿರ್ಧಾರಗಳ ಕುರಿತು ಅನುಭವಗಳನ್ನು ಹಂಚಿಕೊಂಡರು

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಉದ್ಯಮದಲ್ಲಿ ನೈತಿಕತೆ ಮತ್ತು ಗ್ರಾಹಕರೊಂದಿಗೆ ನೈತಿಕ ಮೌಲ್ಯಗಳ ವ್ಯವಹಾರದ ಕುರಿತು ವಿವರಿಸಿದರು. ಬೆಂಗಳೂರಿನ ಐಇಇಇ,ಯಂಗ್ ಪ್ರೊಫೆಶನಲ್ಸ್ ಬಳಗದ ಡಾ. ಅಶ್ವಿನಿ, ಅನಿಕೇತ್ ಕೆ.ಎಸ್.,ಸುರತ್ಕಲ್ ಎನ್.ಐ.ಟಿ,ಕೆಯ ಜತಿನ್ ನಾಯಕ್, ಆದಿತ್ಯ ಕುಲಕರ್ಣಿ ಉದ್ಯಮ ಸಿದ್ಧತೆ, ಸಂಶೋಧನಾವಕಾಶಗಳು, ಉದ್ಯಮಶೀಲತೆ, ಕೌಶಲಗಳ ಕುರಿತು ಮಾರ್ಗದರ್ಶನ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್, ಐಇಇಇ ಘಟಕದ ಕೌನ್ಸಿಲರ್ ಅಶ್ವಿನಿ ವಿ. ಆರ್, ಐಇಇಇಯ ವಿದ್ಯಾರ್ಥಿ ಘಟಕ ಅಧ್ಯಕ್ಷ ಋಷಿಕೇಶ್ ಭಂಡಾರ್ಕರ್, ಉಪಾಧ್ಯಕ್ಷ ಕೀರ್ತನ್ ಡಿ, ವುಮನ್ ಇನ್ ಇಂಜಿನಿಯರಿಂಗ್ ವಿದ್ಯಾರ್ಥಿ ಘಟಕ ಅಧ್ಯಕ್ಷೆ ಶೈಲಾ ಪ್ರಭು, ಉಪಾಧ್ಯಕ್ಷೆ ಮಹತಿ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News