ಅ.15: ನಿನಾದ ದಶಮಾನೋತ್ಸವ ಸಮಾರೋಪ

Update: 2017-10-12 17:23 GMT

ಉಡುಪಿ, ಅ.12: ಇಂದ್ರಾಳಿಯ ನಿನಾ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮ ಹಾಗೂ ವಯೋಲಿನ್ ಉತ್ಸವ ‘ನಾದಾರ್ಪಣ’ದ ಸಮಾರೋಪ ಸಮಾರಂಭಗಳು ಅ.15 ಮತ್ತು ಅ.28ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ನಿನಾದ ಮ್ಯೂಸಿಕ್ ಅಕಾಡೆಮಿಯ ನಿರ್ದೇಶಕ ಜಿ.ರವಿಕುಮಾರ್ ಮೈಸೂರು ತಿಳಿಸಿದ್ದಾರೆ.

ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ವಯೋಲಿನ್ ವಾದನದ ‘ನಾದ ಸಂಭ್ರಮ’ದಲ್ಲಿ ಅ.15ರಂದು ಪಾಶ್ಚಾತ್ಯ, ಹಿಂದುಸ್ಥಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ವಯೋಲಿನ್ ವಾದನ ಜುಗಲ್ ಬಂದಿ ನಡೆದರೆ, ಅ.25ರಂದು ಉಡುಪಿಯಲ್ಲಿ ಮೊದಲ ಬಾರಿ 25 ವಯೋಲಿನ್ ವಾದನಗಳ ಕಾರ್ಯಕ್ರಮ ಜರಗಲಿದೆ ಎಂದರು.

ಕಾರ್ಯಕ್ರಮಗಳನ್ನು ಶ್ರೀಕೃಷ್ಮ ಮಠದ ರಾಜಾಂಗಣದಲ್ಲಿ ಅ.15 ಮತ್ತು 28ರಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಪೇಜಾವರ ಕಿರಿಯ, ಸೋದೆ ಹಾಗೂ ಕಾಣಿಯೂರು ಮಠಗಳ ಶ್ರೀಗಳು ಉಪಸ್ಥಿತರಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ನಿನಾದದ ಕಾರ್ಯದರ್ಶಿ ಶ್ರೇಷ್ಠ ಹಾಗೂ ಐಶ್ವರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News