ಮೀನುಗಾರರ ಸಾಲ ಮನ್ನಾ ಮಾಡುವ ಕುರಿತು ಸರಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ: ಸಚಿವೆ ಮೆರ್ಸಿ ಕುಟ್ಟಿ ಯಮ್ಮ

Update: 2017-10-13 10:05 GMT

ಕಾಸರಗೋಡು, ಅ. 13: ಮೀನುಗಾರರ ಸಾಲ ಮನ್ನಾ ಮಾಡುವ ಕುರಿತು ಸರಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೇರಳ ಮೀನುಗಾರಿಕಾ ಸಚಿವೆ ಮೆರ್ಸಿ ಕುಟ್ಟಿಯಮ್ಮ ಹೇಳಿದರು.

ಶುಕ್ರವಾರ ಕುಂಬಳೆ ಆರಿಕ್ಕಾಡಿ ಆಳಿವೆ ಬಾಗಿಲಿಗೆ ಭೇಟಿ ನೀಡಿದ ಸಚಿವರು, ಬೆಸ್ತರ ಮನವಿಗಳನ್ನು ಸ್ವೀಕರಿಸಿದ ಸಚಿವೆ ಈ ಕುರಿತು ಪ್ರತಿಕ್ರಿಯೆ ನೀಡಿದರು.

ಮೀನುಗಾರಿಕೆಗೆ ದೋಣಿ , ಬಲೆ ಮೊದಲಾದ ಪರಿಕರಗಳನ್ನು ಸಾಲ ಮಾಡಿ ಖರೀದಿಸಿದ ಮೀನುಗಾರರ ಸಮಸ್ಯೆ  ಪರಿಹಾರಕ್ಕೆ  ಸರಕಾರ  ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಇದಲ್ಲದೆ ಪ್ರಕೃತಿ ವಿಕೋಪದಿಂದ ಮೀನುಗಾರರು ಮನೆ, ಆಸ್ತಿ ಪಾಸ್ತಿ , ಮೀನುಗಾರಿಕಾ ಸಾಮಗ್ರಿಗಳನ್ನು ಕಳೆದುಕೊಂಡಿದ್ದಾರೆ. 
ಇದಲ್ಲದೆ ಬಡ್ಡಿ ರಹಿತ ಸಾಲ  ನೀಡುವ ಕುರಿತು ಯೋಜನೆ ತಯಾರಿಸಲಾಗುವುದು.  ಶಿರಿಯ ಆಳಿವೆ ಬಾಗಿಲು ಸಂರಕ್ಷಣೆಗೆ  ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಮಾಜಿ ಶಾಸಕ ಸಿ . ಎಚ್ ಕುಞoಬು  ಹಾಗೂ ಮುಖಂಡರು , ಅಧಿಕಾರಿಗಳು ಸಚಿವರ ಜೊತೆಗಿದ್ದರು. ಬಳಿಕ  ಕುಂಬಳೆ ಕೊಯಿಪ್ಪಾಡಿ ಮೀನುಗಾರಿಕಾ  ಕಾಲನಿಗೆ ಸಚಿವೆ ಭೇಟಿ ನೀಡಿದರು. ನೆಕ್ರಾಜೆ ಸಹಕಾರಿ ಸೊಸೈಟಿ ಶಾಖೆ ಉದ್ಘಾಟಿಸುವರು. ಅನಂತರ ಉದುಮ ಪಳ್ಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಶಿಲಾನ್ಯಾಸ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ  ಪಾಲ್ಗೊಳ್ಳಲು ಸಚಿವೆ ಜಿಲ್ಲೆಗೆ ತಲಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News