ಉಕ್ಕುಡ-ಕಿನ್ಯ-ಕೋಟೆಕಾರ್ ರಸ್ತೆ ಸಂಪರ್ಕ ಕಾಮಗಾರಿಗೆ ಚಾಲನೆ

Update: 2017-10-14 11:24 GMT

ಕೊಣಾಜೆ, ಅ. 14: 17 ವರ್ಷಗಳ ಹಿಂದೆ 35 ಲಕ್ಷ ರೂ. ಅನುದಾನದಲ್ಲಿ ರಸ್ತೆಯಾಗಿ ಮಾರ್ಪಟ್ಟಿದ್ದ ಉಕ್ಕುಡ-ಕೋಟೆಕಾರ್ ರಸ್ತೆ ಈ ಬಾರಿ ಸುಸಜ್ಜಿತವಾಗಿ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ, ಇದಕ್ಕೆ ಕೇಳಿದಷ್ಟು ಅನುದಾನ ಸರ್ಕಾರ ನೀಡಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು.

ಉಕ್ಕುಡ-ಕೋಟೆಕಾರ್-ತಲಪಾಡಿ ರಸ್ತೆಗೆ ಎರಡೂವರೆ ಕೋಟಿ ಅನುದಾನದಲ್ಲಿ ನಡೆಯಲಿರುವ ಕಾಂಕ್ರೀಟ್ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆಗೈದು ಮಾತನಾಡಿದರು.

ಈ ರಸ್ತೆ ನಿರ್ಮಾಣ ಸಂದರ್ಭ ಸ್ಥಳೀಯರು ಅಗತ್ಯ ಜಮೀನು ನೀಡಿದ್ದರು. ಇದೀಗ ಉತ್ತಮ ರಸ್ತೆ ನಿರ್ಮಾಣಗೊಳ್ಳಲಿದ್ದು, ಇದರಿಂದ ಕಲ್ಕಟ್ಟ ಮುಖಾಂತರ ಮಂಜನಾಡಿಗೂ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ ಎಂದರು.

ಸೈಯದ್ ಅಮೀರ್ ತಂಙಳ್ ದುವಾ ನೆರವೇರಿಸಿದರು. ಖಾಸಿ ದಾರಿಮಿ ಕಿನ್ಯ, ಬಾತಿಷ್ ತಂಙಳ್, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಅಬ್ದುಲ್ ಜಬ್ಬಾರ್ ಬೋಳಿಯಾರ್, ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಮಹಮ್ಮದ್, ಅಬೂಸಾಲಿ, ಮಹಾಬಲ ಪೂಂಜ, ಪಿಡಿಒ ಪೂರ್ಣಿಮಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಫಾ ಮಲಾರ್, ಸುರೇಶ್ ಭಟ್ನಗರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಬ್ಬು ಕುರಿಯಾ, ಸಾಧುಕುಂಞಿ ಮಾಸ್ಟರ್, ಹಸೈನಾರ್ ಉಕ್ಕುಡ, ಉಮ್ಮರ್ ಪಜೀರ್, ಮುರಳೀಧರ ಶೆಟ್ಟಿ ವೆರ್ಲ ಇನ್ನಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಫಾರೂಕ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News