ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬೆಳಗಾವಿ ಜೈಲಿನ ಸಹಾಯಕ ಅಧೀಕ್ಷಕ ಭೇಟಿ

Update: 2017-10-16 14:18 GMT

ಮಂಗಳೂರು, ಅ. 16: ವಿಚಾರಣಾಧೀನ ಕೈದಿ ಖುರೇಶಿ ಪ್ರಕರಣ ಹಾಗೂ ಜಿಲ್ಲಾ ಕಾರಾಗೃಹದಲ್ಲಿ ಭದ್ರತೆಗೆ ನಿಯೋಜಿಸಿದ ಕರ್ನಾಟಕ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿ ಮೇಲಿನ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜೈಲಿನ ಸಹಾಯಕ ಅಧೀಕ್ಷಕ ಬಿ.ವಿ.ಮೂಲಿಮನೆ ಸೋಮವಾರ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು.

ಪೊಲೀಸ್ ದೌರ್ಜನ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖುರೇಶಿಯನ್ನು ಗುಣಮುಖರಾಗುವ ಮೊದಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಜೈಲ್ಲಿನಲ್ಲಿರಿಸಲಾಗಿದೆ. ಅಲ್ಲದೆ ಖುರೇಶಿ ಭೇಟಿಗಾಗಿ ಕುಟುಂಬ ಸದಸ್ಯರಿಗೆ ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಗೆ ಅವಕಾಶ ಒದಗಿಸುತ್ತಿಲ್ಲ ಎಂದು ಪಿಯುಸಿಎಲ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕಬೀರ್ ಡಿಜಿಪಿ ಹಾಗೂ ಐಜಿಪಿಗೆ ದೂರು ನೀಡಿದ್ದರು. ಇದಲ್ಲದೆ ಜೈಲಿನಲ್ಲಿ ನಿಯೋಜಿಸಲಾದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಕೈದಿಗಳ ಸಂಬಂಧಿಕರ ಭೇಟಿಗಾಗಿ ಲಂಚಕ್ಕೆ ಬೇಡಿಕೆ ಇಡುತ್ತಾರೆ. ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸಂಘಟನೆಯೊಂದು ಮೇಲಧಿಕಾರಿಗಳಿಗೆ ದೂರು ನೀಡಿತ್ತು. ಈ ಎರಡೂ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿದ ಮುಳಿಮನೆ ಅವರು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ ಸುಮಾರು 2 ಗಂಟೆಯವರೆಗೆ ಜೈಲಿನ ಒಳಗಡೆ ತಪಾಸಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಈ ಸಂದರ್ಭ ಬೆಳಗಾವಿ ಜೈಲು ಸಿಬ್ಬಂದಿ ವಾವರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News