ಎಲ್‌ಇಡಿ ಸರಬರಾಜಿಗೆ ವಿಫಲ: ನೊಯ್ಡ ಕಂಪೆನಿ ವಿರುದ್ಧ

Update: 2017-10-16 17:36 GMT

ಉಡುಪಿ, ನ.16: ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ, ಉತ್ತರ ಪ್ರದೇಶ ರಾಜ್ಯದ ನೊಯ್ಡಾ ಮೂಲದ ಮೇಸರ್ಸ್ ವಿಷನ್ ಇಲೆಕ್ಟ್ರೋನರ್ಜಿ ಪ್ರೈವೆಟ್ ಲಿ. ವಿರುದ್ಧ ದೂರುದಾರ ಗ್ರಾಹಕರಿಗೆ ಅಸಲು ಹಣ 1,46,500ರೂ., ಅದಕ್ಕೆ ಶೇ.9ರ ದರದಲ್ಲಿ ಬಡ್ಡಿ, 30,000ರೂ. ಪರಿಹಾರ ಹಾಗೂ ಐದು ಸಾವಿರ ರೂ. ಕೋರ್ಟ್ ಖರ್ಚುಗಳನ್ನು ನೀಡುವಂತೆ ಆದೇಶ ಹೊರಡಿಸಿದೆ.

ಬ್ರಹ್ಮಾವರದ ಪವರ್ ಕಂಟ್ರೋಲ್ ಸಿಸ್ಟಮ್‌ನ ಮಾಲಕಿ ವಿಮಲಾ ವಿ.ಪ್ರಭು ಹಾಗೂ ಉಡುಪಿಯ ಪ್ರಗತಿ ಪವರ್ ಕೇರ್‌ನ ಬಿ.ರಾಮಚಂದ್ರ ಪ್ರಭು ಅವರು ನೊಯ್ಡೋದ ವಿಷನ್ ಇಲೆಕ್ಟ್ರೋನರ್ಜಿ ಕಂಪೆನಿಯನ್ನು ಪ್ರತಿವಾದಿಯಾಗಿಸಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಶೋಭಾ ಸಿ.ವಿ. ಹಾಗೂ ಸದಸ್ಯರಾದ ಟಿ.ಸಿ.ರಾಜಶೇಖರ ಮತ್ತು ಶಾರದಮ್ಮ ಅವರನ್ನೊಳಗೊಂಡ ಪೀಠ, ಕಂಪೆನಿಯು ದೂರುದಾರರಿಗೆ ಅಸಲು ಹಣ 1,46,500 ರೂ. ಇದಕ್ಕೆ 2016ರ ಆ.30ರಿಂದ ಹಣ ನೀಡುವವರೆಗೆ ಶೇ.9ರಂತೆ ಬಡ್ಡಿ, 30,000 ರೂ. ಪರಿಹಾರ ಹಾಗೂ 5,000ರೂ. ಕೋರ್ಟ್ ಖರ್ಚು ಸಹಿತ ಮೊತ್ತವನ್ನು ದೂರುದಾರರಿಗೆ ಪಾವತಿಸುವಂತೆ ಸೆ.22ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರರು ಎಲ್‌ಇಡಿ ಉತ್ಪನ್ನಗಳ ಸರಬರಾಜಿ ಗಾಗಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರ ಶರ್ತಗಳಂತೆ ಉತ್ಪನ್ನಗಳಿಗಾಗಿ 1,81,000ರೂ.ಗಳನ್ನು ಪಾವತಿಸಿದ್ದರು. ಆದರೆ ಕಂಪೆನಿ ಹಣವನ್ನು ಸ್ವೀಕರಿಸಿದ ಬಳಿಕವೂ ದೂರುದಾರರಿಗೆ ಎಲ್‌ಇಡಿ ವಸ್ತುಗಳನ್ನು ಸರಬರಾಜು ಮಾಡಲು ವಿಫಲವಾಗಿತ್ತು. ದೂರುದಾರರು ಪದೇ ಪದೇ ನೆನಪಿನೋಲೆ ಬರೆದರೂ ಯಾವುದಕ್ಕೂ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.
ಇದರಿಂದ ಬೇಸತ್ತ ವಿಮಲಾ ಪ್ರಭು ಹಾಗೂ ರಾಮಚಂದ್ರ ಪ್ರಭು ಅವರು ಗ್ರಾಹಕ ನ್ಯಾಯಾಲಯದಲ್ಲಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದರು.

ವಿಚಾರಣೆಯ ವೇಳೆ ದೂರುದಾರರು ಕಂಪೆನಿಯೊಂದಿಗೆ ನಡೆಸಿದ ಪತ್ರ ವ್ಯವಹಾರ ಹಾಗೂ ಇತರ ದಾಖಲೆಗಳನ್ನು ಕೋರ್ಟಿನ ಮುಂದಿರಿಸಿದರು. ಆದರೆ ಕೋರ್ಟಿನಿಂದ ನೋಟೀಸು ಸ್ವೀಕರಿಸಿದ ಹೊರತಾಗಿಯೂ ಕಂಪೆನಿ ವಿಚಾರಣೆಗೆ ಸತತವಾಗಿ ಗೈರುಹಾಜರಾಗಿದ್ದಲ್ಲದೇ, ತನ್ನ ಪ್ರತಿನಿಧಿಯಾಗಿ ಯಾರನ್ನೂ ಕಳುಹಿಸಿರಲಿಲ್ಲ.

ಇದರಿಂದ ಬೇಸತ್ತ ವಿಮಲಾ ಪ್ರುಹಾಗೂರಾಮಚಂದ್ರಪ್ರು ಅವರು ಗ್ರಾಹಕ ನ್ಯಾಯಾಲಯದಲ್ಲಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದರು. ವಿಚಾರಣೆಯ ವೇಳೆ ದೂರುದಾರರು ಕಂಪೆನಿಯೊಂದಿಗೆ ನಡೆಸಿದ ಪತ್ರ ವ್ಯವಹಾರ ಹಾಗೂ ಇತರ ದಾಖಲೆಗಳನ್ನು ಕೋರ್ಟಿನ ಮುಂದಿರಿಸಿದರು. ಆದರೆ ಕೋರ್ಟಿನಿಂದ

ನೋಟಿಸು ಸ್ವೀಕರಿಸಿದ ಹೊರತಾಗಿಯೂ ಕಂಪೆನಿ ವಿಚಾರಣೆಗೆ ಸತತವಾಗಿ ಗೈರುಹಾಜರಾಗಿದ್ದಲ್ಲದೇ, ತನ್ನ ಪ್ರತಿನಿಧಿಯಾಗಿ ಯಾರನ್ನೂ ಕಳುಹಿಸಿರಲಿಲ್ಲ. ಇದರಿಂದ ಪ್ರತಿವಾದಿಗಳ ಗೈರುಹಾಜರಿಯಲ್ಲಿ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ದೂರುದಾರರ ಪರವಾಗಿ ತೀರ್ಪು ನೀಡಿ ಆದೇಶ ಪ್ರತಿ ಕೈಸೇರಿದ 30 ದಿನಗಳೊಳಗೆ ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿತು. ದೂರುದಾರ ಗ್ರಾಹಕರ ಪರವಾಗಿ ಹಿರಿಯ ಗ್ರಾಹಕ ವ್ಯಾಜ್ಯಗಳ ನ್ಯಾಯವಾದಿ ಪಿ.ಆರ್.ಭಂಡಾರ್‌ಕರ್, ವಿವೇಕಾನಂದ ಮಲ್ಯ ಹಾಗೂ ಅಶ್ವಿನಿ ಹೆಗ್ಡೆ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News