ಬಸ್ ಢಿಕ್ಕಿ: ವಿದ್ಯುತ್ ಕಂಬಕ್ಕೆ ಹಾನಿ

Update: 2017-10-16 17:41 GMT

ಕಾಪು, ಅ.16: ಕಾಪು ಕೊಂಬಗುಡ್ಡೆ ಬಳಿ ಅ.16ರಂದು ಬೆಳಗ್ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಎಲ್‌ಟಿ ವಿದ್ಯುತ್ ಕಂಬಕ್ಕೆ ಹಾನಿಯಾಗಿರುವ ಘಟನೆ ನಡೆದಿದೆ.

ಖಾಸಗಿ ಬಸ್ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾ ಯಿಸಿಕೊಂಡು ಬಂದು ಮಾರ್ಗ ಬದಿಯಲ್ಲಿದ್ದ ಎಲ್.ಟಿ. ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಮೆಸ್ಕಾಂಗೆ 20,000ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News