ಎಸ್ ಐ ಒ ಸಂಸ್ಥಾಪನಾ ದಿನ: ಉಡುಪಿ ಶಾಖೆಯ ವತಿಯಿಂದ ಧ್ವಜಾರೋಹಣ, ಸಮ್ಮಿಲನ ಕಾರ್ಯಕ್ರಮ

Update: 2017-10-19 05:32 GMT

ಉಡುಪಿ, ಅ. 19: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ 35ನೆ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಎಸ್ ಐ ಒ ಉಡುಪಿ ಶಾಖೆಯ ವತಿಯಿಂದ ಧ್ವಜಾರೋಹಣ ಮತ್ತು ಮಾಜಿ ಸದಸ್ಯರ ಸಮ್ಮಿಲನ ಕಾರ್ಯಕ್ರಮವನ್ನು ಇಂದು ಬ್ರಹ್ಮಗಿರಿಯ ಆದರ್ಶ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಬೆಳಗ್ಗೆ 7:30ಕ್ಕೆ ಸರಿಯಾಗಿ ಮುಖ್ಯ ಅಥಿತಿಯಾಗಿ ಆಗಮಿಸಿದ ಎಸ್ ಐ ಒ ಉಡುಪಿ ಶಾಖೆಯ ಸ್ಥಾಪಕ ಅಧ್ಯಕ್ಷ ಕಲೀಲುಲ್ಲಾ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಇನ್ನೋರ್ವ ಅತಿಥಿ ಎಸ್ ಐ ಒ ಮಾಜಿ ಸದಸ್ಯ, ಕೇಂದ್ರ ಸಲಹಾ ಸಮಿತಿಯ ಸದಸ್ಯ ಡಾ. ಅಬ್ದುಲ್ ಅಝೀಝ್ ತಮ್ಮ ಬಾಲ್ಯದ ಸವಿನೆನಪುಗಳನ್ನು ಹಂಚಿಕೊಂಡರು.

ಸಂಘಟನೆಯ ಮಾಜಿ ಸದಸ್ಯರಾದ ನಿಸಾರ್ ಅಹಮದ್, ಇಫ್ತಿಕಾರ್ ಉಡುಪಿ, ಝೀಯಾ ಉರ್ರೆಹ್ಮಾನ್, ಮಾಜಿ ಕಾರ್ಯಕರ್ತರಾದ ರಯೀಸ್, ರಿಯಾಝ್ ಅಹಮದ್ ಸಂಘಟನೆಯಿಂದ ಕಲಿತ ಶಿಸ್ತು, ನೈತಿಕ ಮೌಲ್ಯಗಳ ಬಗ್ಗೆ ಪರಸ್ಪರ ಹಂಚಿಕೊಂಡರು. ಎಸ್ ಐ ಒ  ಸದಸ್ಯರಾದ ಫಾಝಿಲ್, ಅರ್ಬಾಝ್, ಫರ್ಹಾನ್ ಉಪಸ್ಥಿತರಿದ್ದರು. ಸ್ಥಾನಿಯ ಅಧ್ಯಕ್ಷ ಮಹಮ್ಮದ್ ಶಾರೂಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News