ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಪಂದ್ಯಾಟ

Update: 2017-10-19 17:35 GMT

ಉಡುಪಿ, ಅ.19: ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಸಂಸ್ಥೆ, ಮಣಿಪಾಲ ವಿವಿ ಹಾಗೂ ರೋಟರಿ ಕ್ಲಬ್ ಮಣಿಪಾಲ ಇವುಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅಂತರ್ ಶಾಲಾ-ಕಾಲೇಜು ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟವನ್ನು ಅ.28 ಮತ್ತು 29ರಂದು ಮಣಿಪಾಲದ ಕೆಎಂಸಿ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಈ ಪಂದ್ಯಾಟವು 14,16 ಮತ್ತು 19 ವಯೋಮಿತಿಯ ಒಳಗಿನ ಬಾಲಕ ಹಾಗೂ ಬಾಲಕಿಯರಿಗೆ ನಡೆಯಲಿದೆ. ಪಂದ್ಯಾಟವನ್ನು ಅ.28ರ ಸಂಜೆ 3 ಗಂಟೆಯಿಂದ 9ರ ತನಕ ಹಾಗೂ 29ರಂದು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ನಡೆಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಆಸಕ್ತ ತಂಡಗಳು ಅ.25ರೊಳಗೆ ಸಂಸ್ಥೆಯ ಖಜಾಂಚಿ ಡಾ.ದೀಪಕ್ ಬಾಯರಿ (ಮೊ:9900410776) ಇವರಲ್ಲಿ ಹೆಸರು ನೊಂದಾಯಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News