ಮಾದರಿ ಸರಕಾರಿ ಕಾಲೇಜು ನನ್ನ ಗುರಿ : ಡಾ.ಪಿ.ದಯಾನಂದ ಪೈ

Update: 2017-10-20 14:46 GMT

ಮಂಗಳೂರು,ಅ.20:ನಗರದ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ‘ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು’ಎಂದು ಮರು ನಾಮಕರಣ ಹಾಗೂ ಕಾಲೇಜಿನ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಅ.21ರಂದು ಕಾಲೇಜಿಗೆ ಆಗಮಿಸಲಿದ್ದಾರೆ ಎಂದು ಪ್ರಾಂಶುಪಾಲ ಪ್ರೊ ರಾಜಶೇಖರ್ ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶಾಸಕ ಜೆ.ಆರ್.ಲೋಬೊ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ರಾಜ್ಯ ಪರಿಸರ ಮತ್ತು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಬಿಸಿಯೂಟ ಯೋಜನೆಗೆ ಚಾಲನೆ ನಿಡಲಿದ್ದಾರೆ.ಸರಕಾರದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ವಿಸ್ತೃರಿತ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಿದ್ದಾರೆ.ವಿಧಾನ ಪರಿಷತ್ ವಿಪಕ್ಷ ನಾಯಕ ಕ್ಯಾ.ಗಣೇಶ್ ಕಾರ್ನಿಕ್ ವಿದ್ಯಾರ್ಥಿಗಳ 108 ಚಿಂತನೆಗಳ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.ಸಂಸದ ನಳಿನ್ ಕುಮಾರ್ ಕಟೀಲ್ ನೂತನ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸುಗಳ ಉದ್ಘಾಟನೆ ಮಾಡಲಿದ್ದಾರೆ.ಇದೇ ಸಂದರ್ಭದಲ್ಲಿ ನೂತನ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಶ್ರೀ ದೇವರಾಜ ಅರಸು ಮಹಿಳಾ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ನೆರವೇರಿಸಲಿದ್ದಾರೆ.ಕಾಲೇಜಿನ ನೆಲ ಅಂತಸ್ತಿನ 11 ಕೊಠಡಿಗೆ 2 ಕೋಟಿ 45 ಲಕ್ಷ ರೂಪಾಯಿಗಳನ್ನು ,ಝೆರಾಕ್ಸ್ ಮೆಷಿನ್‌ಗೆ 1,63,548 ರೂಪಾಯಿಗಳನ್ನು ಹಾಗೂ ಕಲರ್ ಪ್ರಿಂಟರ್,ಕಂಪ್ಯೂಟರ್,ಪಿಠೋಪಕರಣ ಹಾಗೂ ಇತರ ಸಲಕರಣೆಗಳಿಗೆ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ ಸೇರಿದಂತೆ ಎಲ್ಲಾ ವೆಚ್ಚವನ್ನು ಡಾ.ದಯಾನಂದ ಪೈ ನೀಡಿದ್ದಾರೆ.ಸರಕಾರದ ಅನುಮತಿ ಹಾಗೂ ವಿಶ್ವ ವಿದ್ಯಾನಿಲಯದ ಅನಮತಿ ಪಡೆದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಪ್ರಾಂಶುಪಾಲ ಪ್ರೊ.ರಾಜ ಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.

‘ಮಾದರಿ ಕಾಲೇಜು ’ ನನ್ನ ಗುರಿ:-ಒಂದು ಕಾಲದಲ್ಲಿ ಕಾಡಿನ ನಡುವಿನ ಶಾಲೆಯೆಂದು ಕರೆಯಲಾಗುತ್ತಿದ್ದ ಶಾಲೆ ಈಗ ಗುಣಮಟ್ಟದಲ್ಲಿ ಬೆಳೆದು ಸರಕಾರಿ ಪ್ರಥಮ ದರ್ಜೆ ಕಾಲೇಜಾಗಿ ಪರಿವರ್ತನೆಯಾಗಿದೆ.ಕಾಲೇಜಿನ ಬಗ್ಗೆ ಆಸಕ್ತಿ ವಹಿಸಿರುವ ಇಲ್ಲಿನ ಜನಪ್ರತಿನಿಧಿಗಳು ಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಿಂದ ಸಂಸ್ಥೆ ಬೆಳೆದಿದೆ.ಸರಕಾರಿ ಕಾಲೇಜು ಪರಿಸರದಲ್ಲಿ ಮಾದರಿ ಕಾಲೇಜು ಆಗ ಬೇಕು ಎನ್ನುವುದು ನನ್ನ ಗುರಿ ಅದಕ್ಕಾಗಿ ಈ ಸಂಸ್ಥೆಗೆ ಇನ್ನೂ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧನಾಗಿರುವುದಾಗಿ ಕಾಲೇಜಿನ ಮಹಾ ಪೊಷಕ ದಯಾನಂದ ಪೈ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News