ಕಡಬ ; ಮಕ್ಕಾ ಮಸೀದಿಯ ಅವಹೇಳನ : ಪೊಲೀಸರಿಗೆ ದೂರು

Update: 2017-10-21 13:40 GMT

ಕಡಬ, ಅ.21. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ನಡೆಸಲಾಗಿದೆಯೆಂದು ಕಡಬದ ಪಂಚಾಯತ್ ಬಿಲ್ಡಿಂಗ್ ನಲ್ಲಿರುವ ಗಣೇಶ್ ಮೊಬೈಲ್ ಅಂಗಡಿಯ ನೌಕರ ಪ್ರದೀಪ್ ಎಂಬವರ ಮೇಲೆ ಎಸ್ಕೆಎಸ್ಸೆಸ್ಸೆಫ್ ಕಡಬ ವಲಯದ ವತಿಯಿಂದ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು.

ಪ್ರದೀಪ್ ಕಾಬಾದ  ಫೊಟೋವನ್ನು ತಿರುಚಿ ತನ್ನ 9741469893 ಸಂಖ್ಯೆಯ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿ ಉಪಯೋಗಿಸಿ ಮಕ್ಕಾವನ್ನು ಅವಮಾನಿಸುವ ಕೃತ್ಯವನ್ನು ಮಾಡಿದ್ದಲ್ಲದೆ ಮುಸ್ಲಿಮರ ಭಾವನೆಯನ್ನು ಕೆರಳಿಸುವಂತಹ ಹೀನಕೃತ್ಯವನ್ನು ಎಸಗಲಾಗಿದೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News