ಅಪಹರಣಕ್ಕೀಡಾದ ಸಫ್ವಾನ್ ರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಕಮಿಷನರ್ ಗೆ ಡಿವೈಎಫ್ಐ ಮನವಿ

Update: 2017-10-21 15:32 GMT

ಮಂಗಳೂರು,ಅ.21ಕಾಟಿಪಳ್ಳದ ಯುವಕ ಸಫ್ವಾನ್ ಅಪಹರಣಕ್ಕೆ ಒಳಗಾಗಿ ಎರಡು ವಾರ ಕಳೆದಿದೆ. ತನಿಖೆಯೂ ಮಂದಗತಿಯಲ್ಲಿ ಸಾಗಿದೆ. ಈ ಸಂಬಂಧ ಪೊಲೀಸ್ ಕಮೀಷನರ್'ರನ್ನು ಇಂದು (ಅ.21)  ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ತಂಡ ಭೇಟಿ ಮಾಡಿ ಮನವಿ ಸಲ್ಲಿಸಿತು. ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಮುಸ್ಬಾ, ನಾಸಿರ್ ಅಹ್ಮದ್  ಹಾಗೂ ಸಫ್ವಾನ್ ತಂದೆ, ಸಹೋದರರು ಜೊತೆಯಲ್ಲಿದ್ದರು.

ಅಪಹೃತ ಸಫ್ವಾನ್ ಪತ್ತೆ ಕಾರ್ಯ ಚುರುಕುಗೊಳಿಸಿ, ಶೀಘ್ರದಲ್ಲೇ ಫಲಿತಾಂಶ ನೀಡುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News