ತೂಮಿನಾಡಿನಲ್ಲಿ ‘ಆಪ್ತ ಸಾಂಸ್ಕೃತಿಕ ಕೂಟ’ ಕಾರ್ಯಕ್ರಮ

Update: 2017-10-22 10:35 GMT

ಮಂಜೇಶ್ವರ, ಅ.22: ಓದುವಿಕೆ, ಪುಸ್ತಕಗಳ ಸಂಗ್ರಹ ಹವ್ಯಾಸ ಇಂದು ಮರೆಯಾಗುತ್ತಿದೆ. ಈ ಮಧ್ಯೆ ನಿವೃತ್ತ ತಹಶೀಲ್ದಾರ್ ಆಗಿರುವ ತೂಮಿನಾಡಿನ ಸೋಮಶೇಖರ್ ಅವರು ತನ್ನ ಮನೆಯನ್ನು ಗ್ರಂಥಾಲಯದ ಮಾದರಿಯಲ್ಲಿ ಪುಸ್ತಕಗಳ ಸಂಗ್ರಹಕ್ಕೆ ಮುಕ್ತವಾಗಿಸಿರುವುದು ಶ್ಲಾಘನೀಯ ಎಂದು ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ.ಗೋಪಾಲಕೃಷ್ಣ ಹೇಳಿದ್ದಾರೆ.

ಕುಂಜತ್ತೂರಿನ ಸಾಹಿತ್ಯ ಕೂಟದ ಆಶ್ರಯದಲ್ಲಿ ತೂಮಿನಾಡಿನಲ್ಲಿಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ‘ಆಪ್ತ ಸಾಂಸ್ಕೃತಿಕ ಕೂಟ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಕೂಟದ ಅಧ್ಯಕ್ಷ ಬಿ. ನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರಿಯ ಕುಡಿಯ ಭಾಗವಹಿಸಿದ್ದರು. ನಿವೃತ ಅಧ್ಯಾಪಕ ಕೃಷ್ಣಪ್ಪ ಪೂಜಾರಿ, ಈಶ್ವರ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕ್ವಿಝ್, ಅಂತ್ಯಾಕ್ಷರಿ, ಸಂಗೀತ ಕುರ್ಚಿ, ಭಾವಗೀತೆ, ಜಾನಪದ ಗೀತೆ ಮೊದಲಾದ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News