ಪಜೀರು ಬೀಜಗುರಿಯಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ

Update: 2017-10-22 12:00 GMT

ಕೊಣಾಜೆ, ಅ. 22: ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ರವಿವಾರ ನಡೆಯಿತು.

ಸಮಾರಂಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುರತ್ಕಲ್‌ನ ವೇದಮೂರ್ತಿ ಶ್ರೀ ಮಹೇಶ್ ಮೂರ್ತಿ ಅವರು, ಜಾಗತೀಕರಣದ ಇಂದಿನ ಕಾಲದಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳುವಂತಾಗುತ್ತಿದೆ. ಆದ್ದರಿಂದ ನಾವು ಜಾಗೃತರಾಗಿ ಗೋಸಂಪತ್ತನ್ನು, ಗೋ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ದಾಟಿಸು ಕೆಲಸ ಮಾಡಬೇಕು ಹೇಳಿದರು.

ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ದೇವು ಮೂಲ್ಯಣ್ಣ ಅವರು ಮಾತನಾಡಿ, ಬೆಳಗ್ಗೆ  ಗೋವಿಗೆ ನಮಸ್ಕರಿಸಿದರೆ ಮುಕ್ಕೋಟಿ ದೇವತೆಗಳ ಆಶೀರ್ವಾದ ನಮ್ಮ ಮೇಲೆ ಇರುತ್ತದೆ. ಗೋ ಸಂಪತ್ತ ಉಳಿಸಿ ಬೆಳೆಸುವ ಕೆಲಸ ಯುವ ಸಮುದಾಯದಿಂದಾಗಬೇಕಾಗಿದೆ. ಗೋಶಾಲೆ ಎಂಬುದು ಒಂದು ದೇವಾಲಯವಿದ್ದಂತೆ. ಹಲವಾರು ಉದ್ಯಮಿಗಳು ತಮ್ಮ ಲಾಭಾಂಶದ ಒಂದು ಭಾಗವನ್ನು ದೇವಸ್ಥಾನಗಳಿಗೆ ನೀಡುತ್ತಾರೆ. ಅದರ ಬದಲು ಇಂತಹ ಗೋಶಾಲೆಗಳಿಗೆ ನೀಡಿದರೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಳ್ಳಾಲ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರಶ್ರೀಕರ ಕಿಣಿ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಲ್ಯ ಮೂಕಾಂಬಿಕ ದೇವಸ್ಥಾನದ ಗೌರವಾಧ್ಯಕ್ಷರಾದ ಮಧುಸೂದನ್ ಆಯರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಗೋವನಿತಾಶ್ರಯ ಟ್ರಸ್ಟ್‌ನ ಟ್ರಸ್ಟಿ ಶ್ರೀಧರ ಭಟ್, ಸಮಿತಿ ಸದಸ್ಯರಾದ ರಘುರಾಮ ಕಾಜವ, ಚಂದ್ರಹಾಸ ಪೂಂಜ, ಪ್ರಶಾಂತ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅವರು ಸ್ವಾಗತಿಸಿದರು. ಟ್ರಸ್ಟಿ ಮನೋಹರ ತುಳಜಾರಾಂ ಅವರು ವಂದಿಸಿದರು. ಕಾರ್ಯದರ್ಶಿ ಡಾ.ಪಿ.ಅನಂತ ಕೃಷ್ಣ ಭಟ್ ಅವು ಪ್ರಾಸ್ತಾವಿಕವಾಗಿ ಮಾತನಾಡಿದರು.

ರವಿ ಅಸೈಗೋಳಿ ಹಾಗೂ ನಾರಾಯಣ ಕುಂಪಲ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News