ಅ. 27ರಂದು 'ಮೂಳೂರು ಜಮಾಅತ್ ವೆಲ್ಫೇರ್ ಅಸೋಸಿಯೇಷನ್ ಮೀಟ್ 2017'

Update: 2017-10-24 09:47 GMT

ಉಡುಪಿ, ಅ.24:  ಮೂಳೂರು  ಜುಮಾ ಮಸೀದಿಗೆ ಒಳಪಟ್ಟ ಮೂಳೂರು ಜಮಾಅತ್ ವೆಲ್ಫೇರ್ ಫೋರಮ್ ಇದರ ವತಿಯಿಂದ "ಮೂಳೂರು ಜಮಾತ್ ವೆಲ್ಫೇರ್ ಅಸೋಸಿಯೇಷನ್ ಮೀಟ್ 2017" ಬ್ರಹತ್ ಸಮಾವೇಶ ಅ.27ರಂದು ಸಂಜೆ 6:30ಕ್ಕೆ  ಬಾರ್ ದುಬೈಯ ಮುಸಲ್ಲಾ ಟವರ್ ಸಭಾಂಗಣದಲ್ಲಿ ನಡೆಯಲಿದೆ.

ಯುಎಇ ಯಲ್ಲಿ ವಾಸಿಸಿತ್ತಿರುವ ಮೂಳೂರು ಜಮಾಅತ್ ಗೆ ಒಳಪಟ್ಟ ಮೂಳೂರು ಮತ್ತು ಪರಿಸರದ ಇತರ ಪ್ರದೇಶದ ಅನಿವಾಸಿ ಕನ್ನಡಿಗರನ್ನು ಒಂದು ಗೂಡಿಸಿ ಶೈಕ್ಷಣಿಕ, ಧಾರ್ಮಿಕ ಸಾಂಸ್ಕೃತಿಕ ಮೊದಲಾದ ಕ್ಷೇತ್ರದಲ್ಲಿ ಸಮಾಜದ ಉನ್ನತಿಗಾಗಿ ಶ್ರಮಿಸುವ ಉದೇಶದಿಂದ ಹಾಗೂ ಮುಖ್ಯವಾಗಿ ಜುಮಾ ಮಸೀದಿ ಹಾಗೂ ಜಮಾಅತ್ ಗೆ ಒಂದು ಸ್ಥಾಯಿ ವರಮಾನ ಬರುವಂತೆ ಏನಾದರೂ ಯೋಜನೆಯನ್ನು ರೂಪಿಸಿ ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮೂಳೂರು ಜುಮಾ ಮಸೀದಿ ಖತೀಬ್ ಆಲ್ ಹಾಜ್ ಅಬ್ದುಲ್ ರಹ್ಮಾನ್ ಆಲ್ ಮದನಿ ಹಾಗೂ ಅಧ್ಯಕ್ಷ ಅಲ್ ಹಾಜ್ ಎಂ.ಎಚ್,ಬಿ. ಮಹಮ್ಮದ್  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಾಗು ಇತರರು ಈ ಸಂದರ್ಭ ಉಪಸ್ಥಿತರಿರುವರು ಎಂದು ಮೂಳೂರು ಜಮಾತ್ ವೆಲ್ಫೇರ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಂ. ಈ. ಮೂಳೂರು,  ಅಧ್ಯಕ್ಷ ಮುಹಮ್ಮದ್ ಯೂಸುಫ್ ಮೂಳೂರು, ಪ್ರ.ಕಾರ್ಯದರ್ಶಿ ಇಬ್ರಾಹಿಂ ಕಳತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News