​ಅ.26ರಿಂದ ಎಸಿಬಿಯಿಂದ ಅಹವಾಲು ಸ್ವೀಕಾರ

Update: 2017-10-24 14:35 GMT

ಉಡುಪಿ, ಅ. 24: ಉಡುಪಿ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಅಧಿಕಾರಿಗಳು ಅ.26ರಂದು ಬೆಳಗ್ಗೆ 11ರಿಂದ ಅಪರಾಹ್ನ 1 ಗಂಟೆಯವರೆಗೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ, ಅಪರಾಹ್ನ 2:30ರಿಂದ 4:30ರವರೆಗೆ ಕಾಪು ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ, ಅ.27ರಂದು ಬೆಳಗ್ಗೆ 11ರಿಂದ ಅಪರಾಹ್ನ 1ಗಂಟೆಯವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ, ಅಪರಾಹ್ನ 2:30ರಿಂದ 4:30ರವರೆಗೆ ಬೈಂದೂರು ಪ್ರವಾಸಿ ಮಂದಿರದಲ್ಲಿ ಸಾವಜರ್ನಿಕರ ಅಹವಾಲು ಸ್ವೀಕರಿಸಲಿದ್ದಾರೆ.

ಯಾವುದೇ ಸಾರ್ವಜನಿಕ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದಲ್ಲಿ, ನಿರ್ಲಕ್ಷತೆ ತೋರಿದಲ್ಲಿ ಅಥವಾ ಲಂಚ ಕೇಳಿದಲ್ಲಿ ದೂರು ಸ್ವೀಕರಿಸಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News