ಮಾರ್ಚ್ 3 ರಂದು ಇರ್ದೆ- ಪಳ್ಳಿತ್ತಡ್ಕ ಉರೂಸ್

Update: 2017-10-24 18:02 GMT

ಪುತ್ತೂರು, ಅ.24 : ವರ್ಷಂಪ್ರತಿ ಆಚರಿಸಿಕೊಂಡು ಬರುವ ಇರ್ದೆ- ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 42ನೇ ಉರೂಸ್ ಸಮಾರಂಭವು 2018 ಮಾ. 3 ರಂದು ನಡೆಯಲಿದೆ ಎಂದು ಕೊರಿಂಗಿಲ ಜಮಾತ್ ಕಮಿಟಿ ಪ್ರಕಟನೆ ತಿಳಿಸಿದೆ.

ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿಯವರ ಅಧ್ಯಕ್ಷತೆಯಲ್ಲಿ ಮಸೀದಿಯಲ್ಲಿ ನಡೆದ ಜಮಾತ್ ಸಭೆಯಲ್ಲಿ ದಿನಾಂಕವನ್ನು ತೀರ್ಮಾನಿಸಲಾಗಿದೆ. ಉರೂಸ್ ಪ್ರಯುಕ್ತ 7 ದಿನಗಳ ಧಾರ್ಮಿಕ ಪ್ರವಚನ ನಡೆಯಲಿದೆ ಎಂದು ಜಮಾತ್ ಕಾರ್ಯದರ್ಶಿ ಕಾಸಿಂ ಕೇಕನಾಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News