ಜೋಕಟ್ಟೆಯಲ್ಲಿ ಕೋಕ್ ಮಳೆ ವರದಿ: ಎಂ.ಆರ್.ಪಿ.ಎಲ್. ನಿಂದ ಸ್ಪಷ್ಟೀಕರಣ

Update: 2017-10-25 18:31 GMT

ಜೋಕಟ್ಟೆ, ಅ. 25: ಜೋಕಟ್ಟೆಯ ಕಟ್ಟಡವೊಂದರ ಮೇಲ್ಛಾವಣಿಯಲ್ಲಿ ಕಂಡು ಬಂದ 'ಧೂಳು' ಬಗ್ಗೆ ಎಂ.ಆರ್.ಪಿ.ಎಲ್. ಸ್ಥಳ ಪರೀಕ್ಷೆ ನಡೆಸಿದ್ದು, ಅದು ಎಂ.ಆರ್.ಪಿ.ಎಲ್. ಘಟಕದ ತ್ಯಾಜ್ಯವಲ್ಲವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಂ.ಆರ್.ಪಿ.ಎಲ್. ಅಧಿಕಾರಿ ಪ್ರಶಾಂತ್ ಬಾಳಿಗ ತಿಳಿಸಿದ್ದಾರೆ.

ಅದಾಗ್ಯೂ ಧೂಳಿನ ನೈಜ ಸ್ವರೂಪವನ್ನು ದೃಢಪಡಿಸಲು ಎಂ.ಆರ್.ಪಿ.ಎಲ್. ತನ್ನ ಹಾಗೂ ಹೊರಗಿನ ಪ್ರಯೋಗಾಲಯಗಳಲ್ಲಿ ಅದರ ವಿಸ್ತೃತ ವಿಶ್ಲೇಷಣೆ ನಡೆಸಲಿದೆ ಎಂದು ಅವರು ಹೇಳಿದರು. 

ಎಂ.ಆರ್.ಪಿ.ಎಲ್.ನ ವಿಷಕಾರಿ ಕೋಕ್ ಹಾರುಬೂದಿ ಜೋಕಟ್ಟೆಯ ಪರಿಸರದಲ್ಲಿ ಸುರಿದಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News