ಟಿಪ್ಪು ಜಯಂತಿ ಆಚರಣೆಗೆ ಸೂಕ್ತ ವಾತಾವರಣ ಕಲ್ಪಿಸಲು ಮನವಿ

Update: 2017-10-26 15:05 GMT

ಮಂಗಳೂರು, ಅ. 26:  ನ. 10ರಂದು ಆಚರಿಸಲಾಗುವ ಟಿಪ್ಪು ಸುಲ್ತಾನ್ ಜಂಯತಿಯನ್ನು ಮುಕ್ತವಾಗಿ ಆಚರಿಸಲು ಅವಕಾಶ ಕಲ್ಪಿಸಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಬ್ರಿಟಿಷರ ಆಡಳಿತದಿಂದ ಭಾರತ ಮುಕ್ತಿಗಾಗಿ ಪ್ರಾಣ ತ್ಯಾಗ ಮಾಡಿದ ಶೂರ ಹಾಗೂ ತನ್ನಿಬ್ಬರು ಮಕ್ಕಳನ್ನು ದೇಶಕ್ಕಾಗಿ ಬಲಿದಾನಗೈದ ಶಹೀದ್ ಎ ಟಿಪ್ಪು ಸುಲ್ತಾನ್ ಜಯಂತಿಯನ್ನು ಯಾವ ಅಡೆತಡೆ ಇಲ್ಲದೆ ಆಚರಿಸುವಂತಾಗಬೇಕು. ಮಸೀದಿ, ಮಂದಿರ ಸಹಿತ ಅನೇಕ ಪೂಜಾ ಸ್ಥಳಗಳನ್ನು ಕಾಪಾಡಿದ, ಆರ್ಥಿಕವಾಗಿ ಜೀಣೋದ್ಧಾರಕ್ಕಾಗಿ ಸಹಾರ ನೀಡಿದ  ಮುಸ್ಲಿಂ ರಾಜನಾಗಿರುತ್ತಾರೆ. ಕ್ಷಿಪಣಿ ಸಹಿತ ಅನೇಕ ಕೊಡುಗೆಗಳನ್ನು ದೇಶಕ್ಕೆ ನೀಡಿದ ಟಿಪ್ಪು ಸುಲ್ತಾನ್ ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದಿರುತ್ತಾರೆ. ಸುಲ್ತಾನ್ ದೇಶ ಹಾಗೂ ಪ್ರಜೆಗಳ ರಕ್ಷಣೆಗಾಗಿ ಅನೇಕ ಕೋಟೆಗಳನ್ನು ನಿರ್ಮಿಸಿದ್ದು, ಇಂದಿಗೂ ಅದು ಗೋಚರಿಸುತ್ತಿದೆ. ಸುಲ್ತಾನ್ ವಿರೋಧಿ ಸಂಘಟನೆಗಳು ಚರಿತ್ರೆಯನ್ನು ತಿರುಚಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಲೀಗ್‌ನ ಜಿಲ್ಲಾ ಅಧ್ಯಕ್ಷ ಸಿ. ಅಹ್ಮದ್ ಜಮಾಲ್, ಸಂಚಾಲಕ ಮುಹಮ್ಮದ್ ಇಸ್ಮಾಯೀಲ್, ಸದಸ್ಯ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News