ವಲಯ ಮಟ್ಟ ಪೊಲೀಸ್ ಕರ್ತವ್ಯಕೂಟ: ಉಡುಪಿ ಜಿಲ್ಲಾ ಪೊಲೀಸ್‌ಗೆ ಸಮಗ್ರ ಪ್ರಶಸ್ತಿ

Update: 2017-10-26 16:45 GMT

ಉಡುಪಿ, ಅ.26: ಮುಡಿಪುವಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಪಶ್ಚಿಮ ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ತಂಡವು 8 ಚಿನ್ನ, 6 ಬೆಳ್ಳಿ ಹಾಗೂ 1 ಕಂಚಿನ ಪದಕ ಸಹಿತ ಸರ್ವಾಂಗೀಣ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಸ್ಪರ್ಧೆಯಲ್ಲಿ ಮಂಗಳೂರು ಕಮೀಷನರ್ ವ್ಯಾಪ್ತಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ನುರಿತ ಪೊಲೀಸ್ ಅಧಿಕಾರಿ ಹಾೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ಉಡುಪಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ವಿನಾಯಕ ಬಿಲ್ಲವ ಫೊರೆನ್ಸಿಕ್ ಸೈನ್ಸ್, ಫಿಂಗರ್ ಪ್ರಿಂಟ್ ಮತ್ತು ಹ್ಯಾಂಡ್ಲಿಂಗ್ - ಲಿಫ್ಟಿಂಗ್ - ಪ್ಯಾಕಿಂಗ್‌ನಲ್ಲಿ ಚಿನ್ನದ ಪದಕ ಹಾಗೂ ಕ್ರೈಂ ಸೀನ್ ಫೋಟೋಗ್ರಫಿಯಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.

 ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ಕ್ರಿಮಿನಲ್ ಲಾ ವಿಭಾಗದಲ್ಲಿ ಕಂಚಿನ ಪದಕ, ಎಆರ್‌ಎಸ್‌ಐನ ಗಿರೀಶ್ ಪೊಲೀಸ್ ಫೋಟೋಗ್ರಫಿಯಲ್ಲಿ ಚಿನ್ನದ ಪದಕ, ಲಕ್ಷ್ಮಣ ಹೆಚ್.ಸಿ. ಪೊಲೀಸ್ ವೀಡಿಯೋಗ್ರಫಿಯಲ್ಲಿ ಚಿನ್ನ, ರಾಜೇಶ್ ಎಹೆಚ್‌ಸಿ, ರೂಂ ಚೆಕ್‌ನಲ್ಲಿ ಚಿನ್ನ, ಹರೀಶ್ ಎಪಿಸಿ, ಎಕ್ಸಪ್ಲೋಸಿವ್ಸ್‌ನಲ್ಲಿ ಚಿನ್ನ, ನಾಗೇಶ್ ಪಿಸಿ ಪೊಲೀಸ್ ಫೋಟೋಗ್ರಫಿಯಲ್ಲಿ ಬೆಳ್ಳಿ ಪಡೆದಿದ್ದಾರೆ.

 ಗೋಕುಲ ಪಿಸಿ ಒಬ್ಸರ್‌ವೇಷನ್ ವಿಭಾಗದಲ್ಲಿ ಬೆಳ್ಳಿ, ಸುಬ್ರಹ್ಮಣ್ಯ ಎಪಿಸಿ ವಾಹನ ತಪಾಸಣೆ ಮತ್ತು ಫ್ರಿಕ್ಷನ್ ಎಕ್ಸೆಸ್ ಕಂಟ್ರೋಲ್ ವಿಭಾಗದಲ್ಲಿ ಬೆಳ್ಳಿ ಹಾಗೂ ಲೋಕೇಶ್ ಎಪಿಸಿ ರೂಂ ಚೆಕ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ.

 ಡಿಸಿಆರ್‌ಬಿಯ ಪಿಎಸ್‌ಐ ನಾರಾಯಣ ಅವರು ತಂಡದ ನೇತೃತ್ವವನ್ನು ವಹಿಸಿದ್ದರು. ತಂಡದ ಕೋಚ್ ಆಗಿ ಡಿಸಿಆರ್‌ಬಿಯ ಪ್ರಕಾಶ್ ಕಾರ್ಯ ನಿರ್ವಹಿಸಿದ್ದರು. ಉಡುಪಿ ತಂಡದ ಸಾಧನೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸಂಜೀವ ಎಂ. ಪಾಟೀಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News