ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಡೆಂಗ್ ಹಾವಳಿ!?
ಬಂಟ್ವಾಳ, ಡಿ. 27: ಮಳೆಗಾಲ ಪ್ರಾರಂಭವಾಗುವ ಮೊದಲೇ ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶಂಕಿತ ಡೆಂಗ್ ಹಾಗೂ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ನಾಗರಿಕರು ಭಯ ಭೀತರಾಗಿದ್ದಾರೆ. ಪುರಸಭಾ ವ್ಯಾಪ್ತಿಯ ಶಾಂತಿಅಂಗಡಿ, ಪರ್ಲಿಯಾ ಹಾಗೂ ಮದ್ವಾ ಕಾಲನಿಯಲ್ಲಿ ಕಳೆದ 2 ವಾರಗಳಿಂದ ಸುಮಾರು 11 ಮಲೇರಿಯಾ ಪ್ರಕರಣ, 3 ಶಂಕಿತ ಡೆಂಗ್ ಪ್ರಕರಣ ಸಹಿತ ಓರ್ವರಿಗೆ ಎರಡೂ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ರೋಗ ಬಾಧಿತರಲ್ಲಿ ಕೆಲವರು ಚಿಕಿತ್ಸೆಯ ಬಳಿಕ ಗುಣ ಮುಖರಾಗಿದ್ದು, ಇನ್ನೂ ಕೆಲವರು ತುಂಬೆ ಹಾಗೂ ಕೈಕಂಬ ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುರಸಭಾ ವ್ಯಪ್ತಿಯ ಜನರು ರೋಗಪೀಡಿತರಾ ಗುತ್ತಿರುವ ಬಗ್ಗೆ ಸ್ಥಳೀಯ ಮುಖಂಡರು ತಾಪಂ ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ ತೋರಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಭೆೇಟಿ ಮಾಡಿ ದೂರು ನೀಡಿದ್ದರು ಎನ್ನಲಾಗಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ತಾಲೂಕು ಆರೋಗ್ಯಾಧಿಕಾರಿಗಳು ರೋಗ ಪೀಡಿತರು ಚಿಕಿತ್ಸೆ ಪಡೆಯುತ್ತಿರುವ ಕೈಕಂಬ ಹಾಗೂ ತುಂಬೆ ಖಾಸಗಿ ಆಸ್ಪತ್ರೆಗೆ ಇಂದು ಬೆಳಗ್ಗೆ ಭೆೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು. ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರ ಆರೋಪ: ಪುರಸಭಾ ವ್ಯಾಪ್ತಿಯ ಪರ್ಲಿಯಾ, ಮದ್ವಾ, ಶಾಂತಿಯಂಗಡಿಯಲ್ಲಿ ವಿವಿಧ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಈ ಕಟ್ಟಡ ಕಾಮಗಾರಿಯಿಂದಾಗಿ ಚರಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದ ರಿಂದ ರೋಗಾಣು ಹರಡುತ್ತವೆ. ಅಲ್ಲದೆ ಕೈಕಂಬ ಪರಿಸರ ದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಬಯಲಿ ನಲ್ಲಿ ಮೂತ್ರವಿಸರ್ಜನೆ ಮಾಡು ತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಶಾಹುಲ್ ಎಸ್.ಎಚ್. ಆರೋಪಿಸಿದ್ದಾರೆ.
ಆತಂಕ ಬೇಡ:ಸಾಮಾನ್ಯ ವೈರಲ್ ಜ್ವರ ಹಾಗೂ ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಸಾರ್ವ ಜನಿಕರು ಈ ಬಗ್ಗೆ ಆತಂಕಗೊಳ್ಳುವುದು ಬೇಡ. ರೋಗ ಪೀಡಿತರಿಗೆ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಲು ಹಾಗೂ ಈ ಕುರಿತು ನಿಗಾ ವಹಿಸಲು ಸೂಕ್ತ ಕ್ರಮ ವಹಿಸಲಾಗಿದೆ. ಘನತ್ಯಾಜ್ಯಗಳನ್ನು ಚರಂಡಿಗೆ ಎಸೆಯದೆ ನಗರಸಭೆಯ ವಾಹನಕ್ಕೆ ನೀಡಬೇಕು. ನೀರನ್ನು ಶೇಖರಣೆ ಮಾಡುತ್ತಿದ್ದರೆ ಅದನ್ನು ಸರಿಯಾಗಿ ಮುಚ್ಚಿ ಡಬೇಕು. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ದವಳೆ ಮನವಿ ಮಾಡಿದ್ದಾರೆ.
ಮಿಸ್ಡ್ ಕಾಲ್ ಕೊಡಿ: ಸ್ವಚ್ಛ ಸರ್ವೇಕ್ಷಣೆಗೆ ನಿಮ್ಮ ನಗರದ ಸ್ವಚ್ಛತೆಯ ಕುರಿತು ತಿಳಿಸಲು ದೂ.ಸಂ. 18006272777ಕ್ಕೆ ಮಿಸ್ಡ್ ಕಾಲ್ ನೀಡುವಂತೆ ಮುಖ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪರಿಶೀಲನೆಯ ಸಂದರ್ಭ ಪರ್ಲಿಯಾ ಕಟ್ಟಡ ಕಾಮಗಾರಿಯ ಸ್ಥಳದಲ್ಲಿ ನೀರು ನಿಂತಿರುವುದು ಪತ್ತೆಯಾಗಿದೆ. ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಯಾಗಿ ರೋಗ ಹರಡಿರುವ ಬಗ್ಗೆ ಶಂಕಿಸಲಾ ಗಿದೆ. ನೀರು ನಿಂತಿರುವ ಸ್ಥಳದಲ್ಲಿ ಮುಂಜಾಗ್ರತ ಕ್ರಮವಾಗಿ ರೋಗನಿರೋಧಕ ಔಷಧಿಯನ್ನು ಸಿಂಪಡಿಸಲಾಗಿದೆ.
ಡಾ. ದೀಪಾ ಪ್ರಭು, ತಾಲೂಕು ಆರೋಗ್ಯ ಅಧಿಕಾರಿ
ಸ್ವಚ್ಛ ಸರ್ವೇಕ್ಷಣೆಗೆ ಸಮಿತಿ ರಚನೆ
ಬಂಟ್ವಾಳ ಪುರಸಭೆಯಲ್ಲಿ ಸ್ವಚ್ಛ ಸರ್ವೇಕ್ಷಣೆ 2018ಗೆ ಸಂಬಂಧಿಸಿದಂತೆ, ಸಮಿತಿಯೊಂದನ್ನು ರಚಿಸಲಾ ಗಿದೆ. ಸಾರ್ವಜನಿಕರು ಸ್ವಚ್ಛತೆಯ ಮಾಹಿತಿ, ಸಮಸ್ಯೆ ಕುರಿತಾಗಿ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು. ಸಮಿತಿಯ ಸದಸ್ಯರಾದ ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮೊ.ಸಂ-9845167837, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರ ಬೆಟ್ಟು ಮೊ.ಸಂ-9845301854 ಮತ್ತು ಹಿರಿಯ ಆರೋಗ್ಯ ನಿರೀಕ್ಷಕರು ರತ್ನಪ್ರಸಾದ್ ಪಿ. ಮೊ.ಸಂ- 9448147697ರನ್ನು ಸಂಪರ್ಕಿಸಬಹುದು.
ರೇಖಾ ಜೆ. ಶೆಟ್ಟಿ, ಪುರಸಭಾಮುಖ್ಯಾಧಿಕಾರಿ