ಜ.1-14: ಪೇಜಾವರ ಪರ್ಯಾಯದ ಮಂಗಲ ಮಹೋತ್ಸವ
ಉಡುಪಿ, ಡಿ.28: ಪರ್ಯಾಯ ಶ್ರೀಪೇಜಾವರ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀಮನ್ನಾಯಸುಧಾ ಮಂಗಲೋತ್ಸವ, ತಾತ್ಪರ್ಯಚಂದ್ರಿಕಾ ಮಂಗಲೋತ್ಸವ, ರಾಷ್ಟ್ರೀಯ ವಿದ್ವದ್ ಗೋಷ್ಠಿ, ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಐದನೆ ಪರ್ಯಾಯದ ಜ್ಞಾನಯಜ್ಞದ ಮಂಗಲ ಮಹೋತ್ಸವ ಜ.1ರಿಂದ ಜ.14ರವರೆಗೆ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಪೇಜಾವರ ಶ್ರೀ ಈ ಕುರಿತು ಮಾಹಿತಿ ನೀಡಿದರು. ಜ.1ರಂದು ಸಂಜೆ 5ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಬನ್ನಂಜೆ ಗೋವಿಂದಾಚಾರ್ಯರಿಂದ ಉಪನ್ಯಾಸ, 2ರಂದು ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳಿಂದ ತಾತ್ಪರ್ಯ ಚಂದ್ರಿಕಾ ಅನುವಾದ, 3ರಂದು ಮತ್ತು 4ರಂದು ಬೆಳಗ್ಗೆ 9.30ಕ್ಕೆ ಸುಧಾನುವಾದ ಮತ್ತು ಪರೀಕ್ಷೆ ನಡೆಯಲಿದೆ.
ಜ. 5ರಂದು ಬೆಳಗ್ಗೆ 9ಗಂಟೆ9ಗೆ ಸುಧಾ ಮಂಗಲ ಮಹೋತ್ಸವದ ಜರಗಲಿದ್ದು, ಪೇಜಾವರ ಸ್ವಾಮೀಜಿಗಳು ಸುಧಾನುವಾದ ಮಾಡಲಿರುವರು. 6ರಂದು ಬೆಳಗ್ಗೆ 9ಗಂಟೆಗೆ ತಾತ್ಪರ್ಯ ಚಂದ್ರಿಕಾ ಮಂಗಲಮಹೋತ್ಸವ ನಡೆಯಲಿದ್ದು, ವಿಶ್ವೇಶ ತೀರ್ಥ ಸ್ವಾಮೀಜಿ ಅನುದಾನ ಮಾಡಲಿರುವರು. 7 ಮತ್ತು 8ರಂದು ಬೆಳಗ್ಗೆ 9.30ಕ್ಕೆ ವಿದ್ವದ್ ಗೋಷ್ಠಿ ಜರಗಲಿದೆ. 10ರಂದು ಬೆಳಗ್ಗೆ 10ಗಂಟೆಗೆ ಪರ್ಯಾಯ ಅವಧಿಯಲ್ಲಿ ಪಾಠ ಮಾಡಿದ ಭಾಗವತತಾತ್ಪರ್ಯ ಹಾಗೂ ನಾಲ್ಕು ವೇದಗಳ ಪಾಠದ ಮಂಗಲೋತ್ಸವ ಮತ್ತು 14ರಂದು ಸಂಜೆ 5ಗಂಟೆಗೆ ಮಹಾಭಾರತ ಮತ್ತು ರಾಮಾಯಣದ ಪ್ರವಚನದ ಮಂಗಲ ಮಹೋತ್ಸವ ನಡೆಯಲಿದೆ.