ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರತಿಭೋತ್ಸವ: ಕೊಣಾಜೆ ಸೆಕ್ಟರ್ ಚಾಂಪಿಯನ್

Update: 2018-01-02 07:48 GMT

ಉಳ್ಳಾಲ, ಜ.2: ಎಸ್ಸೆಸ್ಸೆಫ್ ಉಳ್ಳಾಲ್ ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಪ್ರತಿಭೋತ್ಸವವು ಅಲ್-ಮದೀನಾ  ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅಲ್- ಮದೀನಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಇಸ್ಮಾಯಿಲ್ ಮೊಂಟೆಪದವು ಮಾತನಾಡಿ ಶುಭ ಹಾರೈಸಿದರು.

ಡಿವಿಷನ್ ವ್ಯಾಪ್ತಿಯ ಹನ್ನೊಂದು ಸೆಕ್ಟರ್ ಗಳ ಮಧ್ಯೆ ನಡೆದ ಸುಮಾರು ತೊಂಬತ್ತಾರು ಸ್ಪರ್ಧೆಗಳಲ್ಲಿ ಎಸ್ಸೆಸ್ಸೆಫ್  ಕೊಣಾಜೆ ಸೆಕ್ಟರ್ ಚಾಂಪಿಯನ್ ಆಗಿ ಮೂಡಿ ಬಂತು. ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ದ್ವಿತೀಯ ಸ್ಥಾನವನ್ನೂ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ತೃತೀಯ ಸ್ಥಾನವನ್ನೂ ತಮ್ಮದಾಗಿಸಿಕೊಂಡವು.

ಕ್ಯಾಂಪಸ್ ವಿಭಾಗದಲ್ಲಿ ಕೊಣಾಜೆಯ ವಿಶ್ವಮಂಗಳ ಕಾಲೇಜು ಪ್ರಥಮ, ಪಿ.ಎ.ಇಂಜಿನಿಯರಿಂಗ್ ಕಾಲೇಜು ದ್ವಿತೀಯ ಹಾಗೂ ಮೊಂಟೆಪದವು ಸರಕಾರಿ ಪದವಿ ಪೂರ್ವ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿದವು.

ಸಂಜೆ ನಡೆದ  ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಲ್ -ಮದೀನಾ ಸಂಸ್ಥೆಯ ಅಧ್ಯಕ್ಷ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್  ವಹಿಸಿದ್ದರು. ಎಸ್.ವೈ.ಎಸ್. ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ.ಕಣಚೂರು ಮೋನು ಹಾಜಿ, ಉಪಾಧ್ಯಕ್ಷ ಬಾವು ನೆಕ್ಕರೆ, ಸದಸ್ಯರಾದ ಸುಲೈಮಾನ್ ಹಾಜಿ ಸಾಮಾಣಿಗೆ, ಅಲ್ತಾಫ್ ಕುಂಪಲರವರನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು.

ಆಹಾರ ಸಚಿವ ಯು.ಟಿ.ಖಾದರ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ವೇದಿಕೆಯಲ್ಲಿ ಎಸ್.ವೈ.ಎಸ್. ರಾಜ್ಯ ಸದಸ್ಯ ಉಮರ್ ಸಖಾಪಿ ಎಡಪ್ಪಾಲ, ಉಳ್ಳಾಲ ಕಾರ್ಪೊರೇಟರ್ ಉಸ್ಮಾನ್ ಕಲ್ಲಾಪು, ಎನ್.ಎಸ್.ಕರೀಂ ಹಾಜಿ ನೆಕ್ಕರೆ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯರಾದ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ, ಮುಸ್ತಫಾ ನಈಮಿ ಮೋಂಟುಗೋಳಿ, ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು, ಸಯ್ಯದ್ ಖುಬೈಬ್ ತಂಙಳ್, ಯು.ಎಸ್.ಹಂಝ ಉಳ್ಳಾಲ, ಬಾವ ಹಾಜಿ ಪಂಜಳ, ಫಾರೂಕ್ ತಲಪಾಡಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಡಿವಿಷನ್ ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ಫಾರೂಕ್ ಸಖಾಫಿ ಮದನಿ ನಗರ, ಕನ್ವೀನರ್ ತೌಸಿಫ್ ಸಅದಿ ಹರೇಕಳ, ಮಜೀದ್ ಫರೀದ್ ನಗರ, ಮುಸ್ತಫಾ ಝುಹ್ರಿ ತಲಪಾಡಿ, ಜಮಾಲುದ್ದೀನ್ ಸಖಾಫಿ ಮುದುಂಗಾರು ಕಟ್ಟೆ, ಹಮೀದ್ ನಾಟೆಕಲ್, ಶಿಹಾಬ್ ತೊಕ್ಕೊಟ್ಟು, ಶಮೀರ್ ಸೇವಂತಿ ಗುಡ್ಡೆ, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಜಂದ ಹಿತ್ತಿಲು ಉಪಸ್ಥಿತರಿದ್ದರು.

ತೌಸೀಫ್ ಸಅದಿ ಸ್ವಾಗತಿಸಿದರು, ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News