ಸಸ್ಯಶಾಸ್ತ್ರಜ್ಞ ಡಾ.ಬಿ.ಜಿ.ಎಲ್.ಸ್ವಾಮಿ ನೂರರ ನೆನಪು
ಉಡುಪಿ, ಫೆ.18: ಮಣಿಪಾಲ ಡಾ.ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿ ಯಲ್ ಟ್ರಸ್ಟ್ ವತಿಯಿಂದ ಖ್ಯಾತ ಸಸ್ಯಶಾಸ್ತ್ರಜ್ಞ ಡಾ.ಬಿ.ಜಿ.ಎಲ್.ಸ್ವಾಮಿ ನೂರರ ನೆನಪು ಕಾರ್ಯಕ್ರಮವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೆಂಗಳೂರು ಶಮೀ ಲ್ಯಾಬ್‌ನ ಡಾ.ಕೆ.ವಿ.ಕೃಷ್ಣಮೂರ್ತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಸ್ಯಶಾಸ್ತ್ರಜ್ಞ ಡಾ.ಕೆ.ಗೋಪಾಲ ಕೃಷ್ಣ ಭಟ್ ಹಾಗೂ ಡಾ.ಪಿ.ಕೆ.ರಾಜಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಡಾ.ಕೆ.ಗೋಪಾಲಕೃಷ್ಣ ಭಟ್, ಖ್ಯಾತ ಸಸ್ಯಶಾಸ್ತ್ರಜ್ಞ ರಾಗಿದ್ದ ಬಿ.ಜಿ.ಎಲ್.ಸ್ವಾಮಿ, ಸಸ್ಯ ಭ್ರೂಣ ಶಾಸ್ತ್ರಗಳ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ರಚಿಸಿದ್ದರು. ಕಾರ್ಟೂನಿಸ್ಟ್ ಆಗಿದ್ದ ಅವರ ಬರಹದಲ್ಲಿ ಹಾಸ್ಯವನ್ನು ಕಾಣ ಬಹುದಾಗಿದೆ. ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಶೋಧನ ಪ್ರಬಂಧ ಗಳನ್ನು ಬರೆಯುತ್ತಿದ್ದರು ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಆರ್.ನಂಬಿಯಾರ್, ದೇವಕಿಯಮ್ಮ ಸ್ವಾಗತಿಸಿದರು. ಮಂಗಳೂರಿನ ದತ್ತಂ ಆಯುರ್ಧಾಮದ ಡಾ.ಅನಸೂಯ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ವಿಚಾರ ಸಂಕಿರಣ ನಡೆಯಿತು.