ಉಡುಪಿ: ಮುರಾರಿ-ಕೆದ್ಲಾಯ ರಂಗೋತ್ಸವ ಉದ್ಘಾಟನೆ

Update: 2018-03-30 15:30 GMT

ಉಡುಪಿ, ಮಾ.30: ಉಡುಪಿಯ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮುರಾರಿ-ಕೆದ್ಲಾಯ ರಂಗೋತ್ಸವವನ್ನು ಕರಾವಳಿಯ ಹಿರಿಯ ರಂಗನಟಿ ಗೀತಾ ಸುರತ್ಕಲ್ ಶುಕ್ರವಾರ ಉದ್ಘಾಟಿಸಿದರು.

ರಥಬೀದಿ ಗೆಳೆಯರು ಬಳಗದಿಂದ ಉತ್ತಮ ನೆಲೆಯಲ್ಲಿ ರಂಗ-ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಬಗ್ಗೆ ಮೆಚ್ಚುಗೆಯ ಮಾತು ಗಳನ್ನಾಡಿದ ಗೀತಾ, ಮುರಾರಿ-ಕೆದ್ಲಾಯ ಅವರಂಥ ಶ್ರೇಷ್ಠ ರಂಗಕರ್ಮಿ ಗಳ ಹೆಸರನ್ನು ಶಾಶ್ವತವಾಗಿರಿಸುವಲ್ಲಿ ರಥಬೀದಿ ಗೆಳೆಯರ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಜಿಎಂ ಕಾಲೇಜು ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್ ಮಾತನಾಡಿ, ಸಮಾಜದ ಬೆಂಬಲ ಇದ್ದಲ್ಲಿ ಕಲೆಯ ಪರಿಸರ ಉಳಿಯಲು ಸಾಧ್ಯ ಎಂದು, ರಂಗೋತ್ಸವಕ್ಕೆ ಶುಭ ಹಾರೈಸಿದರು.

ರಥಬೀದಿ ಗೆಳೆಯರು ಬಳಗದ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿಡಿಯಡ್ಕ, ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ, ನಾಟಕ ವಿಭಾಗದ ಸಂಚಾಲಕ ಸಂತೆಷ್ ನಾಯಕ್ ಪಟ್ಲ ಉಪಸ್ಥಿತರಿದ್ದರು. 

ಉದ್ಯಾವರ ನಾಗೇಶ್‌ಕುಮಾರ್ ಪ್ರಸ್ತಾವಿಕ ಮಾತನಾಡಿದರು. ನಾಟಕ ವಿಭಾಗ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು. ಬಳಿಕ ನಟನ ಮೈಸೂರು ತಂಡದವರಿಂದ ಕೆಂಪು ಕಣಗಿಲೆ ನಾಟಕ ಪ್ರಸ್ತುತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News