ತುಳು ಲಿಪಿ ಮುದ್ರಿತ ‘ಶ್ರೀ ಹರಿಸ್ತುತಿ’ ಪುಸ್ತಕ ಬಿಡುಗಡೆ
Update: 2018-04-01 15:59 GMT
ಮಂಗಳೂರು, ಎ. 1: 9ನೆ ತರಗತಿ ವಿದ್ಯಾರ್ಥಿ ನಿಷ್ಕಲ್ ರಾವ್ ಸಂಗ್ರಹಿಸಿದ ತುಳು ಲಿಪಿಯಲ್ಲೇ ಮುದ್ರಿತವಾಗಿರುವ ‘ಶ್ರೀ ಹರಿಸ್ತುತಿ’ ಪುಸ್ತಕ ರವಿವಾರ ನಗರದ ಶಾರದಾ ವಿದ್ಯಾಲಯದಲ್ಲಿ ಬಿಡುಗಡೆಗೊಂಡಿತು.
ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪುಸ್ತಕ ಬಿಡುಗಡೆಗೊಳಿಸಿದರು.
ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಕದ್ರಿ ದೇವಾಲಯ ಮುಖ್ಯ ಅರ್ಚಕ ವಿದ್ವಾನ್ ಕದ್ರಿ ಪ್ರಭಾಕರ ಅಡಿಗ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ಜ್ಞಾತಿಪದಕೋಶ ಸಂಪಾದಕ ಡಾ.ಪದ್ಮನಾಭ ಕೇಕುಣ್ಣಾಯ, ಅತುಲ್ ರಾವ್, ಮೀರಾ, ಉಷಾ ಎಸ್. ರಾವ್ ಉಪಸ್ಥಿತರಿದ್ದರು.