ಎ.13ರಿಂದ ಉಡುಪಿಯಲ್ಲಿ ‘ಬಣ್ಣದ ಹೆಜ್ಜೆ ಮಕ್ಕಳ ರಂಗ ತರಬೇತಿ ಶಿಬಿರ

Update: 2018-04-06 14:54 GMT

ಉಡುಪಿ, ಎ.6: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಮತ್ತು ಮಣಿಪಾಲದ ರಂಗ ಸಂಸ್ಥೆ ಸಂಗಮ ಕಲಾವಿದೆರ್ ಮಣಿಪಾಲ ಇವುಗಳ ಜಂಟಿ ಆಯೋಜನೆಯಲ್ಲಿ ಎ.13ರಿಂದ 24ರವರೆಗೆ ಪ್ರತಿದಿನ ಬೆಳಗ್ಗೆ 9:00ರಿಂದ ಸಂಜೆ 5:00ರವರೆಗೆ 10-15 ವಯಸ್ಸಿನ ಮಕ್ಕಳ ರಂಗ ತರಬೇತಿ ಶಿಬಿರ ‘ಬಣ್ಣದ ಹೆಜ್ಜೆ’ಯನ್ನು ಮಣಿಪಾಲ ಪದವಿಪೂರ್ವ ಕಾಲೇಜಿನಲ್ಲಿ ನಾಡಿನ ಖ್ಯಾತ ರಂಗ ನಿರ್ದೇಶಕ ಡಾ.ಶ್ರೀಪಾದ್ ಭ್ರ ನಿರ್ದೇಶನದಲ್ಲಿ ಆಯೋಜಿಸಲಾಗಿದೆ.

ಶಿಬಿರದ ಕೊನೆಯಲ್ಲಿ ಕುವೆಂಪು ಅವರ ‘ನನ್ನ ಗೋಪಾಲ’ ನಾಟಕವನ್ನು ತಾತ್ವಿಕ ಹಿನ್ನಲೆಯಾಗಿಸಿಕೊಂಡು, ದೇವರನ್ನು ಮಾರಾಟಕ್ಕಿಟ್ಟಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮದೇ ಸಖ, ಸ್ನೇಹಿ, ಗೆಳೆಯನಾಗಬಹುದಾದ ಜನಸ್ನೇಹಿ ದೇವರ ರೂಪಕವನ್ನು ನನ್ನ ಗೋಪಾಲನ ಮೂಲಕ ಮಕ್ಕಳು ಅವರಿಗೆಟಕುವ ಭಾಷೆಯಲ್ಲಿ ಕಟ್ಟಿಕೊಡಲಿದ್ದಾರೆ.

ಸಮಾಜದ ಎಲ್ಲಾ ಸ್ತರದ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಶಿಬಿರಕ್ಕೆ ಯಾವುದೇ ಪ್ರವೇಶ ಶುಲ್ಕವನ್ನು ಇರಿಸಿಲ್ಲ. ಈ ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತ ಮಕ್ಕಳ ಪಾಲಕರು ಸಂತೋಷ್ ಶೆಟ್ಟಿ ಹಿರಿಯಡ್ಕ (9113569959), ಭುವನ್ ಮಣಿಪಾಲ (8746930404) ಇವರಲ್ಲಿ ಹೆಸರು ನೋಂದಾಯಿಸಬಹುದು ಎಂದು ಶಿಬಿರದ ಸಂಚಾಲಕ ರಾಜು ಮಣಿಪಾಲ ಮತ್ತು ಉದ್ಯಾವರ ನಾಗೇಶ್ ಕುಮಾರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News