ದೇವರಕೊಂಡಾ ರೆಡ್ಡಿಗೆ ತಾಳ್ತಜೆ ಕೇಶವ ಪ್ರಶಸ್ತಿ

Update: 2018-05-11 16:30 GMT

ಉಡುಪಿ, ಮೇ 11: ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡದ ಹಿರಿಯ ವಿದ್ವಾಂಸ ಡಾ. ದೇವರಕೊಂಡಾ ರೆಡ್ಡಿ ಇವರಿಗೆ 2018ರ ಸಾಲಿನ ತಾಳ್ತಜೆ ಕೇಶವ ಪ್ರಶಸ್ತಿಯನ್ನು ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡದ ವಿದ್ವಾಂಸ ಪರಂಪರೆಯನ್ನು ಶ್ರೀಮಂತಗೊಳಿಸಿದ ಸಂಶೋಧಕ ಪ್ರೊ. ತಾಳ್ತಜೆ ಕೇಶವ ಭಟ್ಟರ (1920-2005) ನೆನಪಿನಲ್ಲಿ ನೀಡಲಾಗುವ ತಾಳ್ತಜೆ ಕೇಶವ ಪ್ರಶಸ್ತಿಯನ್ನು ಡಾ.ದೇವರಕೊಂಡಾ ರೆಡ್ಡಿ ಇವರಿಗೆ ಮೇ 26ರ ಶನಿವಾರ ಬೆಳಗ್ಗೆ 10:30ಕ್ಕೆ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗು ವುದು. ಪ್ರಶಸ್ತಿ 25,000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳ ಗೊಂಡಿರುತ್ತದೆ.

ದೇವರಕೊಂಡಾ ರೆಡ್ಡಿ ಬೆಂಗಳೂರಿನ ಅನೇಕಲ್ ತಾಲೂಕಿನ ವಣಕನಹಳ್ಳಿ ಎಂಬಲ್ಲಿ 1948ರಲ್ಲಿ ಜನಿಸಿದರು. 1971ರಲ್ಲಿ ಬೆಂಗಳೂರು ವಿವಿಯಿಂದ ಕನ್ನಡ ಎಂ.ಎ ಹಾಗೂ 1993ರಲ್ಲಿ ‘ತಲಕಾಡಿನ ಗಂಗರ ದೇವಾಲಯಗಳು-ಒಂದು ಅಧ್ಯಯನ’ ಎಂಬ ವಿಷಯದ ಕುರಿತು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ ರೆಡ್ಡಿ, ನಂತರ ಹಂಪಿ ಕನ್ನಡ ವಿವಿಯಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಸಮಾಜವಿಜ್ಞಾನಗಳ ನಿಕಾಯದ ಡೀನ್ ಆಗಿ ಸೇವೆ ಸಲ್ಲಿಸಿ ದ್ದಾರೆ.

ಶಾಸನ, ವಾಸ್ತುಶಿಲ್ಪ, ದೇವಾಲಯ, ಲಿಪಿಯ ಹುಟ್ಟು ಬೆಳವಣಿಗೆ ಮುಂತಾದ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಕೃತಿಗಳನ್ನು, ಅನುವಾದ ಗ್ರಂಥಗಳನ್ನು ರಚಿಸಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಗಂಗರ ಶಿಲ್ಪ ಕಲೆ, ಶ್ರವಣಬೆಳಗೊಳದ ಬಸದಿಗಳ ವಾಸ್ತು ಶಿಲ್ಪ, ಲಿಪಿಯ ಹುಟ್ಟು ಮತ್ತು ಬೆಳವಣಿಗೆ, ಕರ್ನಾಟಕ ಶಾಸನಗಳಲ್ಲಿ ಶಾಪಾಶಯ ಇವರ ಮುಖ್ಯ ಕೃತಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News