‘ಪಮ್ಮಣೆ ದಿ ಗ್ರೇಟ್’ ಸಿನಿಮಾ ಬಿಡುಗಡೆ

Update: 2018-08-24 23:25 IST
‘ಪಮ್ಮಣೆ ದಿ ಗ್ರೇಟ್’ ಸಿನಿಮಾ ಬಿಡುಗಡೆ
  • whatsapp icon

ಮಂಗಳೂರು, ಆ.24: ಕುಡ್ಲ ಸಿನಿಮಾಸ್‌ನಲ್ಲಿ ಮುತ್ತುರಾಮ್ ಕ್ರಿಯೇಷನ್ ನಿರ್ಮಾಣದ ‘ಪಮ್ಮಣ್ಣೆ ದಿ ಗ್ರೇಟ್’ ತುಳು ಸಿನೆಮಾದ ಪ್ರೀಮಿಯರ್ ಶೋ ಬಿಡುಗಡೆ ಕಾರ್ಯಕ್ರಮ ನಗರದ ಭಾರತ್ ಮಾಲ್‌ನಲ್ಲಿ ಗುರುವಾರ ಜರುಗಿತು.

ಕರಾವಳಿ ಸಮೂಹ ಕಾಲೇಜ್‌ನ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್, ತುಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ಕ್ಯಾಟ್ಕಾದ ಅಧ್ಯಕ್ಷ ಪಮ್ಮ್ಮಿಕೊಡಿಯಾಲ್ ಬೈಲು, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ವಿಜಯಕುಮಾರ್ ಕೊಡಿಯಾಲ್ ಬೈಲ್, ರಕ್ಷಣಾ ವೇದಿಕೆಯ ಅಧ್ಯಕ್ಷ ಯೊಗೀಶ್ ಶೆಟ್ಟಿ ಜಪ್ಪು, ವಸಂತ ಕುಮಾರ್, ಭೋಜರಾಜ್ ವಾಮಂಜೂರ್, ಸ್ಟ್ಯಾನ್ಲಿ, ನಿರ್ಮಾಪಕರಾದ ಕೃಷ್ಣ ನಾಯಕ್ ಕಾರ್ಕಳ, ವಿರೇಂದ್ರ ಸುವರ್ಣ ಕಟೀಲ್, ನಿರ್ದೇಶಕ ಇಸ್ಮಾಯೀಲ್ ಮೂಡುಶೆಡ್ಡೆ, ನಟ ಪೃಥ್ವಿ ಅಂಬರ್, ನಟಿ ಶಿಲ್ಪಾಸುವರ್ಣ ಉಪಸ್ಥಿತರಿದ್ದರು.

ಈ ತುಳು ಸಿನೆಮಾವು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ 14 ಟಾಕೀಸ್‌ಗಳಲ್ಲಿ ಸಿನೆಮಾ ಬಿಡುಗಡೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News