ಗಾಂಧೀಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ: ಡಾ.ಭಾಸ್ಕರ ಮಯ್ಯ

Update: 2018-10-02 16:29 GMT

ಉಡುಪಿ, ಅ.2: ಗಾಂಧೀಜಿ ಯಾವುದೇ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳದೆ ದೇಶ, ಕಾಲಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡಿದ್ದರು. ಗಾಂಧಿವಾದವು ಗಾಂಧಿಯ ಅನುಯಾಯಿಗಳಿಂದಾಗಿ ಮುಂದೆ ಹೋಗಿಲ್ಲ. ಇದಕ್ಕೆ ಗಾಂಧಿ ಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದೇ ಕಾರಣ ಎಂದು ಲೇಖಕ ಡಾ.ಜಿ.ಭಾಸ್ಕರ ಮಯ್ಯ ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಸಂಘಟನೆಯ ವತಿಯಿಂದ ಉಡುಪಿ ಬಳಕೆ ದಾರರ ವೇದಿಕೆಯ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ಮಂಗಳವಾರ ವಿಷ್ಣು ಭಟ್ ಗೋಡ್ಸೆಯ ‘ನನ್ನ ಪ್ರವಾಸ’(1857ರ ಮೊದಲ ಸ್ವಾತಂತ್ರ ಸಂಗ್ರಾಮದ ವೀಕ್ಷಕ ಕಥನ) ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿಯ ವ್ಯಕ್ತಿತ್ವ ಇಡೀ ಜಗತ್ತಿನಲ್ಲೇ ವಿರಳ. ಆದರೆ ಗಾಂಧೀಯನ್ನು ಕೇವಲ ಅಹಿಂಸೆಯ ವಕ್ತಾರ ಹಾಗೂ ಅವರನ್ನು ಚರಕಕ್ಕೆ ಕಟ್ಟಿ ಹಾಕಿ ಅಭಿವೃದ್ಧಿ ಯನ್ನೇ ತಿರಸ್ಕರಿಸಿದವರಂತೆ ಬಿಂಬಿಸಲಾಗಿದೆ. ಇದು ಗಾಂಧಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಕಂಡಿರುವ ದೊಡ್ಡ ವೈಫಲ್ಯವಾಗಿದೆ ಎಂದು ಅವರು ತಿಳಿಸಿದರು.

ಮೊದಲ ಸ್ವಾತಂತ್ರ ಸಂಗ್ರಾಮದ ಕುರಿತ ದೊಡ್ಡ ದಾಖಲೆಯೇ ಈ ಕೃತಿ ಯಾಗಿದೆ. 1857ರ ಅನುಭವವನ್ನು ವಿಷ್ಣು ಭಟ್ 1883ರಲ್ಲಿ ಬರೆದರು. ಆದರೆ ಆ ಕೃತಿಯನ್ನು ಬ್ರಿಟಿಷರ ಭೀತಿಯಿಂದ ಪ್ರಕಟಿಸುವ ಧೈರ್ಯ ಇರಲಿಲ್ಲ. ಚಿಂತಾಮಣಿ ಎಂಬವರು ತನ್ನ ಬಳಿ ಇದ್ದ ಹಸ್ತಪ್ರತಿಯನ್ನು 1907ರಲ್ಲಿ ಕೃತಿ ಯಾಗಿ ಪ್ರಕಟಿಸಿದರು. ನಂತರ ಈ ಕೃತಿಯನ್ನು ಇತಿಹಾಸ ತಜ್ಞರು ಅಧ್ಯಯನಕ್ಕೆ ಬಳಸಿಕೊಂಡರೂ ಯಾರೂ ಕೂಡ ವಿಷ್ಣು ಭಟ್‌ರ ಹೆಸರ್ನು ಉಲ್ಲೇಖ ಮಾಡಿ ರಲಿಲ್ಲ ಎಂದರು.

ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಳೀಧರ ಉಪಾ ಧ್ಯಾಯ ಹಿರಿಯಡ್ಕ ವಹಿಸಿದ್ದರು. ಈ ಸಂದರ್ಭ ಡಾ.ಭಾಸ್ಕರ್ ಮಯ್ಯ ಅವರೊಂದಿಗೆ ಸಂವಾದ ನಡೆಯಿತು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News