ಉಡುಪಿಯಲ್ಲಿ ಬೂದಿ ಮಿಶ್ರಿತ ಮಳೆ: ಕೇಂದ್ರ ಪರಿಸರ ಇಲಾಖೆ ವಿಜ್ಞಾನಿಯಿಂದ ಪರಿಶೀಲನೆ

Update: 2018-10-03 15:03 GMT

ಉಡುಪಿ, ಅ. 3: ಉಡುಪಿ ನಗರ ಹಾಗೂ ಜಿಲ್ಲೆಯ ಅನೇಕ ಕಡೆಗಳಲ್ಲಿ ಆಗಸ್ಟ್ ತಿಂಗಳ ಮೊದಲ ವಾರ ಬೂದಿ ಮಿಶ್ರಿತ ಅಸಹಜ ಮಳೆಯ ಕುರಿತಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ವಿಜ್ಞಾನಿಯೊಬ್ಬರು ಬಂದು ಪರಿಶೀಲಿಸಿ, ತನಿಖೆ ನಡೆಸಿ ತೆರಳಿದ್ದು, ಅವರಿಂದ ವರದಿಯನ್ನು ನಿರೀಕ್ಷಿಸಲಾ ಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಮತ್ತು ಪರಿಸರ ಸಚಿವಾಲಯ ತನಗೆ ಬಂದ ದೂರಿನ ಹಿನ್ನೆಲೆಯಲ್ಲಿ ವಿಜ್ಞಾನಿ ಯೊಬ್ಬರನ್ನು ತನಿಖೆಗಾಗಿ ಕಳುಹಿಸಿದ್ದು, ಅವರು ಉಡುಪಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿದ್ದು ಮಾತ್ರವಲ್ಲದೇ, ಪಡುಬಿದ್ರಿ ಸಮೀಪದಲ್ಲಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಯೋಜನಾ ಪ್ರದೇಶಕ್ಕೂ ತೆರಳಿ ಅಲ್ಲೂ ತನಿಖೆ ನಡೆಸಿದ್ದಾರೆ. ಅವರು ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ ಎಂದರು.

ಬೂದಿಮಿಶ್ರಿತ ಮಳೆಯ ಕುರಿತು ಸುರತ್ಕಲ್ ಎನ್‌ಐಟಿಕೆ ನೀಡಿರುವ ವರದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಎನ್‌ಐಟಿಕೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗ ನೀಡಿದ ವರದಿಯಲ್ಲಿ ಮಳೆಯಲ್ಲಿ ಸಿಲಿಕಾನ್ (ಮರಳು) ಹಾಗೂ ಬೂದಿ ಅಂಶ ಪತ್ತೆಯಾಗಿದೆ ಎಂದು ಹೇಳಿದ್ದರೂ, ಅದರಲ್ಲಿ ಹಾರುಬೂದಿಯ ಅಂಶ ಪತ್ತೆಯಾಗಿರಲಿಲ್ಲ ಎಂದು ತಿಳಿಸಿದೆ ಎಂದರು.

ಕಳೆದ ಆ.4ರಂದು ಸಂಜೆ ವೇಳೆ ಬಿದ್ದ ಬೂದಿಮಿಶ್ರಿತ ಮಳೆಯ ಕುರಿತು ಉಡುಪಿಯ ಪರಿಸರಾಸಕ್ತರ ಗುಂಪೊಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆಗೆ ಲಿಖಿತ ದೂರೊಂದನ್ನು ನೀಡಿತ್ತು. ಜೊತೆಗೆ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿ ಕೇಂದ್ರ ಪರಿಸರ ಇಲಾಖೆಗೂ ಸಾರ್ವಜನಿಕ ದೂರು ಅರ್ಜಿಯೊಂದನ್ನು ಕಳುಹಿಸಿಕೊಟ್ಟಿತ್ತು. ಇದರಲ್ಲಿ ಈ ಮಳೆಗೆ ನಿಜವಾದ ಕಾರಣವನ್ನು ಪತ್ತೆ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದು, ಈ ದೂರು ಅರ್ಜಿಗೆ 100ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದರು. ಈ ದೂರು ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ತನಿಖೆಗೆ ವಿಜ್ಞಾನಿಯನ್ನು ಕಳುಹಿಸಿಕೊಟ್ಟಿದೆ.

ಆ.4ರಂದು ಸಂಜೆ ವೇಳೆ ಬಿದ್ದ ಬೂದಿಮಿಶ್ರಿತ ಮಳೆಯ ಕುರಿತು ಉಡುಪಿಯ ಪರಿಸರಾಸಕ್ತರ ಗುಂಪೊಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆಗೆ ಲಿಖಿತ ದೂರೊಂದನ್ನು ನೀಡಿತ್ತು. ಜೊತೆಗೆ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿ ಕೇಂದ್ರ ಪರಿಸರ ಇಲಾಖೆಗೂ ಸಾರ್ವಜನಿಕ ದೂರು ಅರ್ಜಿಯೊಂದನ್ನು ಕಳುಹಿಸಿಕೊಟ್ಟಿತ್ತು. ಇದರಲ್ಲಿ ಈ ಮಳೆಗೆ ನಿಜವಾದ ಕಾರಣವನ್ನು ಪತ್ತೆ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದು, ಈ ದೂರು ಅರ್ಜಿಗೆ 100ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದರು. ಈ ದೂರು ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ತನಿಖೆಗೆ ವಿಜ್ಞಾನಿಯನ್ನು ಕಳುಹಿಸಿಕೊಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News