ವ್ಯಕ್ತಿತ್ವ, ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಅಪಾಯಕಾರಿ - ಪ್ರೊ.ಜಿ.ಬಿ.ಶಿವರಾಜು

Update: 2018-11-17 17:31 GMT

ಮೂಡುಬಿದಿರೆ, ನ. 17:  ವ್ಯಕ್ತಿತ್ವ ನಿರ್ಮಾಣ ಹಾಗೂ ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಬಹಳ ಅಪಾಯಕಾರಿಯೆಂದು ಪ್ರೊ.ಜಿ.ಬಿ.ಶಿವರಾಜು ಅಭಿಪ್ರಾಯ ಪಟ್ಟರು. ವಿದ್ಯಾಗಿರಿಯಲ್ಲಿ ನಡೆಯುತ್ತಿರುವ 15ನೇ ಸಾಲಿನ ನುಡಿಸಿರಿಯಲ್ಲಿ ಸಮಾಜ ಅಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಗಾಂಧಿ ಸ್ಮಾರಕ ನಿಧಿ ಬೆಂಗಳೂರುನ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು  ಮಾತನಾಡಿ, ವ್ಯಕ್ತಿಕೇಂದ್ರ ಅಭಿವೃದ್ಧಿ ಸಾಧ್ಯ, ಅದಕ್ಕೆ ಜ್ವಲಂತ ಉದಾಹರಣೆ ನುಡಿಸಿರಿಯ ಸಂಚಾಲಕರಾದ ಮೋಹನ್ ಆಳ್ವರು ಎಂದರು. 

ಭಾರತಿಯ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿರುವುದು ಬಹಳ ಅಪಾಯಕಾರಿ. ನಾವೂ ಇಂದು  ಕೇವಲ ಇಂಜಿನಿಯರಿಂಗ್ ಹಾಗೂ ಇನ್ನಿತರ ವೃತ್ತಿಪರ ಶಿಕ್ಷಣದಕಡೆಗೆ ಗಮನಹರಿಸುತ್ತಿದ್ದೆವೆಯೇ ಹೊರತು ಚಾರಿತ್ಯ ನಿರ್ಮಾಣ ಹಾಗೂ ಸಾಂಸ್ಕøತಿಕವಾಗಿ ಮನಸ್ಸನ್ನು ಕಟ್ಟುವ ಕೆಲಸವನ್ನು ಮಾಡುತ್ತಿಲ್ಲ. ಇಂದಿನ ಯುವಜನತೆ ಸಾಪ್ಟ್‍ವೆರ್‍ನಲ್ಲಿ ದುಡಿಯುವ ಹುಮ್ಮಸ್ಸಿನಲ್ಲಿ ಬದುಕನ್ನು ಹಾರ್ಡ್‍ವೆರ್‍ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಬದುಕು ಕಲಿಸುವ ಪಾಠ ಶಿಕ್ಷಣ ಕಲಿಸದಿದ್ದರೆ ಬದುಕು ಬರಡಾಗುವ ಸಾದ್ಯತೆ ಹೆಚ್ಚು. ನಾವೂ ಕಂಪ್ಯೂಟರ್ ಉಪಯೋಗಿಸುವುದನ್ನು ಕಲಿತ್ತಿದ್ದವೇ ಆದರೆ ನಮ್ಮ ಮನಸ್ಸನ್ನೇ ತಿಳಿಯಲಾಗದ ಪರಿಸ್ಥಿಯಲ್ಲಿದ್ದೆವೆ. ಮಕ್ಕಳಲ್ಲಿ ಮೌಲ್ಯ ತುಂಬುವ ಕೆಲಸ ಮುಖ್ಯ. ಮೌಲ್ಯವಿಲ್ಲದ ಬದುಕು ಅರ್ಥಹೀನ ಎಂದರು.

ಭಾರತಿಯ ಸಂಸ್ಕೃತಿಯ ಅನನ್ಯತೆಯನ್ನು ಸ್ಮರಿಸುತ್ತಾ ರಾಬರ್ಟ್‍ಬಾರ್ವೆಲ್, ಮ್ಯಾಕ್ಸ್ ಮುಲ್ಲರ್ ಅವರ ಉಲ್ಲೆಖ ಮಾಡಿದರು. ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ಶಿಕ್ಷಣ  ಎಂದರೇ ಮಕ್ಕಳನ್ನು ಯಂತ್ರವಾಗಿಸುವುದಲ್ಲಾ. ಬದಲಿಗೆ ಮೌಲ್ಯಗಳನ್ನು ಕಲಿಸುವುದು, ಆಳ್ವಾಸ್ ನುಡಿಸಿರಿಗೆ ತನ್ನದೆ ಆದ ಗಾಂಭಿರ್ಯ ಇದೆ. ನುಡಿಸಿರಿಯ ಯಾವುದೇ ಸಮ್ಮೇಳಗಳಲ್ಲಿ ಆ ಗಾಂಬಿರ್ಯಕ್ಕೆ ಕೊರತೆಯಾಗುವುದಿಲ್ಲಾ ಎಂದು ಅಭಿಪ್ರಾಯ ಪಟ್ಟರು. ಇಂದಿನ ಯುವಕರಲ್ಲಿ ಹೊಣೆಗಾರಿಕೆಯ ಕೊರತೆ ಇದೆ . ಯುವಕರಲ್ಲಿ ಚಾರಿತ್ಯ ನಿರ್ಮಾಣವಾಗಬೇಕು. ಹಾಗೂ ಯುವಜನರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕಾಗಿದೆ. ಅದಕ್ಕೆ ಶಿಸ್ತಿ ಮೌಲ್ಯ ಮುಖ್ಯ ಎಂದರು ಅಭಿಪ್ರಾಯ ಪಟ್ಟರು.

2018ನೇ ಸಾಲಿನ ನುಡಿಸಿರಿ ಸಮ್ಮೇಳನಾಧ್ಯಕ್ಷರಾದ ಡಾ. ಮಲ್ಲಿಕಾ ಘಂಟಿ ಹಾಗೂ ನುಡಿಸಿರಯ ಉಪಾಧ್ಯಕ್ಷರಲ್ಲಿ ಒಬ್ಬರಾದ ನಾ.ದಾಮೊದರ ಶೆಟ್ಟಿ ಉಪತ್ಥಿತರಿದ್ದರು. ಕನ್ನಡ ಉಪನ್ಯಾಸಕ ಗುರುಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News