ಡಿ.6 ರಿಂದ ಪಾರಂಪರಿಕ ಚಿಕಿತ್ಸಾ ಪದ್ದತಿಯ ಅಂತರ್‌ರಾಷ್ಟ್ರೀಯ ಸಮ್ಮೇಳನ

Update: 2018-12-04 15:24 GMT

ಬೆಂಗಳೂರು, ಡಿ.4: ಕೇಂದ್ರ-ರಾಜ್ಯ ಸರಕಾರ, ಆಯುಷ್ ಇಲಾಖೆ ಸಹಯೋಗದೊಂದಿಗೆ ಭಾರತೀಯ ವಿದ್ಯಾರ್ಥಿ ಪರಿಷತ್ ಡಿ.5ರಿಂದ ಐದು ದಿನಗಳವರೆಗೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಅಂತರ್‌ರಾಷ್ಟ್ರೀಯ ಸಮ್ಮೇಳನ ಹಾಗೂ ಆರೋಗ್ಯ ಮೇಳವನ್ನು ಆಯೋಜಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಜ್ಞಾಸದ ಅಧ್ಯಕ್ಷ ಡಾ.ಅಲ್ಲಮಪ್ರಭು, ಸಾಂಪ್ರದಾಯಿಕ ಆರೋಗ್ಯ ಪದ್ದತಿಗಳ ಜಾಗತಿಕ ಪ್ರದರ್ಶನ ಇದಾಗಿದ್ದು, ಆಯುರ್ವೇದ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ- ಸಲಹೆ ನೀಡಲಾಗುತ್ತದೆ. ಅಲ್ಲದೆ, 175ಕ್ಕೂ ಅಧಿಕ ಔಷಧ ಮಳಿಗೆಗಳಿರಲಿವೆ ಹಾಗೂ ಇಪ್ಪತ್ತು ದೇಶಗಳ ಸಹಭಾಗಿತ್ವ, ನೂರಕ್ಕೂ ಅಧಿಕ ಅಂತರ್‌ರಾಷ್ಟ್ರೀಯ ಪರಿಣಿತರು, 2500 ದೇಶ-ವಿದೇಶ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ.ನಡ್ಡಾ, ಸಚಿವ ಶ್ರೀಪಾದ ಎಸ್ಸೋ ನಾಯ್ಕ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ, ಕ್ಯಾಲಿರ್ಫೋನಿಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಶಿಕ್ಷಕ ಡೆವಿಡ್ ಪಾರ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News