ಎಸ್ಸೆಸ್ಸೆಫ್ ಜಾಲಿ ಮೊಹಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

Update: 2018-12-17 15:50 GMT

ಬೆಂಗಳೂರು, ಡಿ.17: ಎಸ್ಸೆಸೆಫ್‌ನ ಜಾಲಿ ಮೊಹಲ್ಲಾ ಶಾಖಾ ಅಧ್ಯಕ್ಷರಾಗಿ ನೌಷಾದ್ ಅದೂರ್, ಪ್ರಧಾನ ಕಾರ್ಯದರ್ಶಿ ಮುನೀರ್ ನೆರಿಯ, ಕೋಶಾಧಿಕಾರಿ ಅಸಿಫ್ ಕಾರ್ಗಲ್ ಹಾಗೂ ಉಪಾಧ್ಯಕ್ಷರಾಗಿ ಇಲ್ಯಾಸ್ ಕಾಸರಗೋಡು, ಬಶೀರ್ ಅಸೈಗೊಳಿ ಆಯ್ಕೆಯಾಗಿದ್ದಾರೆ. 

ಇತ್ತೀಚೆಗೆ ಲಕ್ಕಾಡ್ ಶಾ ದರ್ಗಾ ವಠಾರದಲ್ಲಿ ವಾರ್ಷಿಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮೆಜೆಸ್ಟಿಕ್ ಡಿವಿಜನ್ ಪ್ರಧಾನ ಕಾರ್ಯದರ್ಶಿಯ ಸಮ್ಮುಖದಲ್ಲಿ ಶಾಖೆಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಲಾಯಿತು. ನಂತರ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News