ತ್ಯಾಜ್ಯದಿಂದ ನೈಸರ್ಗಿಕ ಗೊಬ್ಬರ ತಯಾರಿಕೆ: ಅನಂತವನ ಪಾರ್ಕ್‌ನಲ್ಲಿ 20 ನೂತನ ಯಂತ್ರಗಳ ಅಳವಡಿಕೆ

Update: 2018-12-17 16:20 GMT

ಬೆಂಗಳೂರು, ಡಿ.17: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ‘ಅನಂತವನ’ ಉದ್ಯಾನವನದಲ್ಲಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ನೈಸರ್ಗಿಕ ಗೊಬ್ಬರವಾಗಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೂತನವಾಗಿ ಅಭಿವೃದ್ದಿಪಡಿಸಲಾಗುತ್ತಿರುವ ಉದ್ಯಾನವನದಲ್ಲಿ 20 ತ್ಯಾಜ್ಯ ಯಂತ್ರಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸ್ವಚ್ಛ ಗೃಹ ಕೇಂದ್ರ ಎಂದು ಹೆಸರಿಡಲಾಗಿದ್ದು, ಅರ್ಧ ಕೆಜಿ ತ್ಯಾಜ್ಯದಿಂದ ಹಿಡಿದು 45ಕೆಜಿ ವರೆಗೂ ತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ಸಾಮರ್ಥ್ಯ ಈ ಯಂತ್ರಗಳಿಗಿದೆ. ಈ ತ್ಯಾಜ್ಯ ಸಂಪೂರ್ಣವಾಗಿ ನೈಸರ್ಗಿಕ ಗೊಬ್ಬರವಾಗಿ ತಯಾರಾಗಲು 45 ದಿನಗಳ ಕಾಲಾವಕಾಶ ಬೇಕಾಗುತ್ತದೆ.

ತರಬೇತಿ ಕಾರ್ಯಾಗಾರ: ಇದರ ಜತೆಗೆ ಮನೆಯಲ್ಲಿಯೆ ತ್ಯಾಜ್ಯದಿಂದ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ತರಬೇತಿ ಕೂಡಾ ನೀಡಲಾಗುತ್ತದೆ. ಉಚಿತ ತರಬೇತಿ ಇದಾಗಿದ್ದು, ಶಾಲಾ ಮಕ್ಕಳು, ಸ್ಥಳೀಯ ವಾಸಿಗಳು, ಹಾಗೂ ಆಸಕ್ತರು ಭಾಗಿಯಾಗಬಹುದಾಗಿದೆ.

ರವಿವಾರವೂ ಸೇರಿದಂತೆ ಪ್ರತಿದಿನ ಬೆಳಗ್ಗೆ 8ರಿಂದ 12ರವರೆಗೆ ತರಬೇತಿ ನೀಡಲಾಗುತ್ತದೆ. ಸಂಜೆ 4ಯಿಂದ 7ರವರೆಗೆ ಯಂತ್ರಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಉದ್ಯಾನವನಕ್ಕೆ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಸ್ಮರಣಾರ್ಥವಾಗಿ ಅನಂತ ವನ ಎಂದು ಹೆಸರಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News