ಪ್ರಾಣಿಗಳ ಚಲನವಲನ ಪತ್ತೆಗೆ ಕ್ಯಾಮೆರಾ ಟ್ರಾಪ್

Update: 2018-12-21 16:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.21: ಹುಲಿ ಸಂತತಿಯ ಬಗ್ಗೆ ನಿಖರ ಅಂಕಿ ಅಂಶ ತಿಳಿಯಲು ಅರಣ್ಯ ಇಲಾಖೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಾಣಿಗಳ ಚಲನವಲನಗಳನ್ನು ಪತ್ತೆ ಹಚ್ಚಲು ಕ್ಯಾಮೆರಾ ಟ್ರಾಪ್ ಪ್ರಕ್ರಿಯೆ ಬಳಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.

ದೇಶದಲ್ಲಿ ಹೆಚ್ಚಿನ ಹುಲಿ ಸಂತತಿ ಕರ್ನಾಟಕದಲ್ಲಿದೆ. ಪ್ರತಿಯೊಂದು ಹುಲಿಗಳ ಗುರುತು ಮತ್ತು ದಾಖಲೆ ಅರಣ್ಯ ಇಲಾಖೆ ಹೊಂದಿದೆ. ಆದರೂ ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳ ವರ್ತನೆ ಹಾಗೂ ಪ್ರಾಣಿ ಮತ್ತು ಮಾನವ ಸಂಘರ್ಷಗಳ ಚಲನವಲನಗಳನ್ನು ಕ್ಯಾಮೆರಾದಲ್ಲಿ ಟ್ರಾಪ್ ಮಾಡಲಾಗುತ್ತದೆ. ಹುಲಿಗಳ ಬಗ್ಗೆ ದಾಖಲೆ ಸಂಗ್ರಹ ಮಾಡುವ ನಿಟ್ಟಿನಲ್ಲಿ ವಿಶೇಷ ಘಟಕ ಸ್ಥಾಪಿಸಲಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆ ಸಹಾಯಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಬಿ. ಮಾಲ್ಕೇಡೆ ತಿಳಿಸಿದ್ದಾರೆ. ಇದೇ ಮಾದರಿಯ ವಿಶೇಷ ಘಟಕವನ್ನು ದೇಶದ ವಿವಿಧ ಭಾಗಗಳಲ್ಲಿ ವನ್ಯ ಮೃಗ ಸಂಸ್ಥೆಗಳೂ ಸ್ಥಾಪಿಸಿದೆ. ಆದರೆ ಈ ಯೋಜನೆಗೆ ಮುನ್ನುಡಿ ಬರೆದಿರುವುದು ವಿಶೇಷವಾಗಿದ್ದು, ಕ್ಯಾಮೆರಾ ಟ್ರಾಪ್ ಪ್ರಕ್ರಿಯೆ ಮೂಲಕ ಸೆರೆಯಾಗುವ ಚಿತ್ರಗಳನ್ನು ಸಂಗ್ರಹಿಸಿ ದಾಖಲೆಗಳನ್ನು ಸಿದ್ಧಪಡಿಸುತ್ತೇವೆ ಎಂದು ಹೇಳಿದ್ದಾರೆ.

ನಾವು ಹೆಸರು ಅಥವಾ ಹುಲಿಗಳ ಸಂಖ್ಯೆಯನ್ನು ಬರಂಗಪಡಿಸುವುದಿಲ್ಲ. ಆದರೆ ಹುಲಿಗಳನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಹುಲಿ ಇರುವ ಪ್ರದೇಶಗಳನ್ನು ಪತ್ತೆಹಚ್ಚಿ ಸಾಫ್ಟ್‌ವೇರ್ ಭೂಪಟವನ್ನು ಸಿದ್ಧಪಡಿಸಿದ್ದೇವೆಂದು ತಿಳಿಸಿದ್ದಾರೆ.

ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕ್ಯಾಮರಾ ಟ್ರಾಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 6000 ಕ್ಯಾಮರಾ ಟ್ರಾಪ್ ಸಲಕರಣೆಗಳಿದ್ದು, 3000 ಕಡೆಗಳಲ್ಲಿ ಹುಲಿಗಳ ವಿವರ ಸಂಗ್ರಹಿಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News