ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನ

Update: 2018-12-29 17:21 GMT

ಬೆಂಗಳೂರು, ಡಿ.29: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರು ಸದಸ್ಯರ ನೇಮಕಾತಿಗಾಗಿ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಕ್ಷಣ, ಮಕ್ಕಳ ಆರೋಗ್ಯ ರಕ್ಷಣೆ, ಮಕ್ಕಳ ಕಲ್ಯಾಣ ಅಥವಾ ಮಕ್ಕಳ ಅಭಿವೃದ್ಧಿ, ಬಾಲನ್ಯಾಯ ಅಥವಾ ನಿರ್ಲಕ್ಷಿಸಲ್ಪಟ್ಟ ಮಕಳ ರಕ್ಷಣೆ ಅಥವಾ ಸೌಲಭ್ಯ ವಂಚಿತ ಕಟ್ಟಕಡೆಯ ಮಕ್ಕಳು ಅಥವಾ ವಿಕಲಚೇತನ ಮಕ್ಕಳು, ಬಾಲಕಾರ್ಮಿಕ ಪದ್ದತಿ ನಿರ್ಮೂಲನ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಮಕ್ಕಳು, ಮಕ್ಕಳ ಮನ:ಶಾಸ್ತ್ರ ಅಥವಾ ಮನ:ಶಾಸ್ತ್ರ ಅಥವಾ ಸಮಾಜ ಶಾಸ್ತ್ರ, ಮಕ್ಕಳ ಕಾನೂನುಗಳು ಈ ಕ್ಷೇತ್ರಗಳಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.

ಸದರಿ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು ಮಹಿಳಾ ಸದಸ್ಯರನ್ನು ಒಳಗೊಂಡಂತೆ) ರಾಜ್ಯ ಸರಕಾರ ನೇಮಿಸಬೇಕಾಗಿದೆ. ಸದಸ್ಯರ ಅವದಿಯು 3 ವರ್ಷದಾಗಿದ್ದು, ಸದಸ್ಯರುಗಳ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 57 ವರ್ಷದೊಳಗಿರಬೇಕು.

ಆಸಕ್ತರು ನಿಗಧಿತ ನಮೂನೆಯನ್ನು ಭರ್ತಿಮಾಡಿ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಹುಮಹಡಿಗಳ ಕಟ್ಟಡ, 1ನೆ ಮಹಡಿ, ಬೆಂಗಳೂರು ಇವರಿಗೆ ಸಲ್ಲಿಸಹುದಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾತಿಗಾಗಿ ಇಲಾಖೆಯ ಅಂತರ್‌ಜಾಲ http://www.dwcd.kar.nic ನಲ್ಲಿ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News