ವಿಕಲಚೇತನರಿಗೆ ಸೋಲಾರ್ ವಿದ್ಯುತ್ ಪೆಟ್ಟಿ ಅಂಗಡಿ ವಾಹನ ವಿತರಣೆ

Update: 2018-12-31 14:31 GMT

ಬೆಂಗಳೂರು, ಡಿ.31: ನಗರದಲ್ಲಿನ ವಿಶೇಷಚೇತನರಿಗೆ ಸ್ವಯಂ ಉದ್ಯೋಗವಕಾಶ ಕಲ್ಪಿಸಲು ಮುಂದಾಗಿರುವ ಬಿಬಿಎಂಪಿ, 59ಕೋಟಿ ರೂ.ವೆಚ್ಚದಲ್ಲಿ 400ಮಂದಿ ವಿಕಲಚೇತನರಿಗೆ ಸೋಲಾರ್ ವಿದ್ಯುತ್ ಪೆಟ್ಟಿ ಅಂಗಡಿ ವಾಹನಗಳನ್ನು ವಿತರಿಸಲು ತೀರ್ಮಾನಿಸಿದೆ.

ಬಿಬಿಎಂಪಿಯ ಕಲ್ಯಾಣ ವಿಭಾಗವು ಆರ್ಥಿಕವಾಗಿ ಹಿಂದುಳಿದಿರುವ ವಿಶೇಷ ಚೇತನರಿಗೆ ಸಿಬ್ಸಿಡಿ ದರದಲ್ಲಿ ಈ ಸೌಲಭ್ಯ ಕಲ್ಪಿಸುತ್ತಿದೆ. ವಿಕಲಚೇತನರು ತಮಗೆ ಸೂಕ್ತ ಎನಿಸಿದ ಜಾಗದಲ್ಲಿ ವ್ಯಾಪಾರ ಮಾಡಲು ಅನುಕೂಲವಾಗುವಂತಹ ರೀತಿಯಲ್ಲಿ ಸೋಲಾರ್ ವಿದ್ಯುತ್ ಪೆಟ್ಟಿ ಅಂಗಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ.

ಈ ವಾಹನದಲ್ಲಿ ವೀಲ್ ಚೇರ್‌ಗಳೆ ಸೋಲಾರ್ ವಿದ್ಯುತ್ ಪೆಟ್ಟಿ ಅಂಗಡಿಗಳಾಗಲಿವೆ. ಇದರಲ್ಲಿ ವ್ಯಾಪಾರ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಸಾಕಷ್ಟು ಜಾಗವಿರುತ್ತದೆ. ವೀಲ್‌ಚೇರ್‌ನಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ವಿದ್ಯುತ್ ಅಥವಾ ಸೊೀಲಾರ್‌ನಿಂದ ಚಾರ್ಜ್ ಮಾಡಬಹುದಾಗಿದೆ.

8 ತಾಸು ಕಾಲ ಸೂರ್ಯನ ಬೆಳಕಿನಲ್ಲಿ ನಿಲುಗಡೆ ಮಾಡಿದರೆ, ಸಂಪೂರ್ಣ ಚಾರ್ಜ್ ಆಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ, 45ಕಿಮೀ ಸಂಚರಿಸಬಹುದು. ಸೋಲಾರ್ ವಿದ್ಯುತ್ ಪೆಟ್ಟಿ ಅಂಗಡಿಗಳಲ್ಲಿ ಟೀ ಕಾಫಿ, ತಿಂಡಿ ತಿನಿಸು, ಹಣ್ಣು ತರಕಾರಿ ಮಾರಾಟ ಮಾಡಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ.

ಈ ಯೋಜನೆಗೆ 59ಕೋಟಿ ರೂ. ವೆಚ್ಚವಾಗಲಿದೆ. ಪಾಲಿಕೆ 8ವಲಯಗಳಿದ್ದು, ಪ್ರತಿ ವಾರ್ಡ್‌ಗೆ 2, 3ಪೆಟ್ಟಿ ಅಂಗಡಿ ಮಾದರಿಯ ವಾಹನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಒಟ್ಟು 400ವಾಹನಗಳನ್ನು ನೀಡಲಾಗುವುದು, ಸದ್ಯ ವಾಹನಗಳ ಖರೀದಿಗೆ ಟೆಂಡರ್ ಕರೆಯಲಾಗಿ ಎಂದು ಹೆಚ್ಚುವರಿ ಆಯುಕ್ತ ಡಿ.ರಣದೀಪ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News