ದೇಶದ ನಿಜವಾದ ‘ಚೋರ್’ ಯಾರೆಂದು ಈಗ ಗೊತ್ತಾಯಿತು: ಯಡಿಯೂರಪ್ಪ

Update: 2018-12-31 16:47 GMT

ಬೆಂಗಳೂರು, ಡಿ. 31: ಅಗಸ್ಟಾ ವೆಸ್ಟ್ ಲ್ಯಾಂಡ್‌ನ ಮಧ್ಯವರ್ತಿ ವಿಚಾರಣೆ ವೇಳೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರು ಹೇಳುವ ಮೂಲಕ ದೇಶಕ್ಕೆ ನಿಜವಾದ ‘ಚೋರ್’ ಯಾರೆಂದು ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು ಪ್ರಧಾನಿ ಮೋದಿಯನ್ನು ಚೋರ್ ಎಂದು ಟೀಕಿಸಿ ಅಪಮಾನ ಮಾಡಿದ್ದರು ಎಂದು ಲೇವಡಿ ಮಾಡಿದರು.

ಆಗಸ್ತಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮಿಶೆಲ್, ಕಾಂಗ್ರೆಸ್ ಸೋನಿಯಾ ಗಾಂಧಿ ಹೆಸರನ್ನು ಪ್ರಸ್ತಾಪಿಸಿ ದ್ದಾರೆ. ಅಲ್ಲದೆ, ಈ ದಲ್ಲಾಳಿ ವ್ಯವಹಾರದಲ್ಲಿ ರಾಹುಲ್ ಗಾಂಧಿಯೂ ಫಲಾನುಭವಿ ಎನ್ನುವ ಪ್ರಬಲ ಸುಳಿವನ್ನು ನೀಡಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.

ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಲೂಟಿ ಹೊಡೆದವರ ವಿರುದ್ಧ ನಿಗಾ ಇರಿಸುವ ನಿಜವಾದ ‘ಚೌಕಿದಾರ’ ಎನ್ನುವುದು ಇದೀಗ ಸಾಬೀತಾಗಿದೆ. ಹೀಗಾಗಿ ಮೋದಿಯನ್ನು ಚೋರ್ ಎಂದು ಕಾಂಗ್ರೆಸ್ ಮುಖಂಡರು ಬೊಬ್ಬೆ ಹಾಕುತ್ತಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News