ಶಿಶು ಮರಣ ತಡೆಯಲು ಸರಕಾರಿ ಆಸ್ಪತ್ರೆಯಲ್ಲೂ ಮದರ್ಸ್ ಮಿಲ್ಕ್ ಬ್ಯಾಂಕ್ ಆರಂಭ

Update: 2019-01-05 16:28 GMT

ಬೆಂಗಳೂರು, ಜ.5: ತಾಯಿ ಎದೆಹಾಲಿನ ಕೊರತೆಯಿಂದ ಅದೆಷ್ಟೊ ಶಿಶುಗಳು ಮರಣ ಹೊಂದುತ್ತಿದ್ದು, ಶಿಶುಗಳ ಜೀವ ರಕ್ಷಣೆಗಾಗಿ ಬೆಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ತಾಯಿ ಎದೆಹಾಲಿನ ಬ್ಯಾಂಕ್ ಆರಂಭಿಸಲಾಗುತ್ತಿದೆ.

ಸತತ 3 ವರ್ಷದ ಪರಿಶ್ರಮದಿಂದ ಆ ಕನಸು ಈಗ ನನಸಾಗುತ್ತಿದ್ದು, ಕಳೆದ ಸಲ 35 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಪರಿಕರಗಳಿಗೆ ಬೇಕಿರುವ 90 ಲಕ್ಷ ಹಣವನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಕೇಳಲಾಗಿದೆ. ತಾಯಿ ಎದೆಹಾಲು ಸಂರಕ್ಷಣೆ ಮಾಡುವುದಕ್ಕೆ ಸಾಕಷ್ಟು ಮುತುವರ್ಜಿ ವಹಿಸಬೇಕು. ಹೀಗಾಗಿ ಕೆಲಸ ನಿಧಾನವಾದರೂ ಎಲ್ಲವೂ ಸರಿ ಇರಬೇಕೆಂದು ವಾಣಿವಿಲಾಸ ಆಸ್ಪತ್ರೆಯ ಎಂ.ಎಸ್.ಗೀತಾ ಶಿವಮೂರ್ತಿ ತಿಳಿಸಿದರು.

ಪ್ರತಿಯೊಂದು ನವಜಾತ ಶಿಶುಗಳಿಗೂ ತಾಯಿಯ ಎದೆಹಾಲು ಅಗತ್ಯ. ಹುಟ್ಟಿದ ಮಗುವಿಗೆ ತಕ್ಷಣ ಎದೆಹಾಲುಣಿಸಲಾಗುತ್ತೆ. ಆದರೆ ಇತ್ತೀಚೆಗೆ ನಾನಾ ಕಾರಣಗಳಿಂದ ಪೌಷ್ಟಿಕ ಎದೆಹಾಲಿನ ಕೊರತೆಯಿಂದಾಗಿ ಅದೆಷ್ಟೋ ಶಿಶುಗಳು ಸಾವನ್ನಪ್ಪುತ್ತಿವೆ. ಈ ನಿಟ್ಟಿನಲ್ಲಿ ಎದೆಹಾಲಿನ ಕೊರತೆ ನೀಗಿಸಲು ನಗರದಲ್ಲಿ ಎದೆಹಾಲು ಮಾರಾಟ ಕೇಂದ್ರವನ್ನು ಸರಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿದೆ. ಈಗಾಗಲೇ ನಗರದ ಖಾಸಗಿ ಮದರ್ಸ್ ಮಿಲ್ಕ್ ಬ್ಯಾಂಕ್‌ಗಳಿವೆ. ಆದರೆ ಮೊದಲ ಬಾರಿಗೆ ಸರಕಾರಿ ಆಸ್ಪತ್ರೆಯಲ್ಲಿ ಮದರ್ಸ್ ಮಿಲ್ಕ್ ಬ್ಯಾಂಕ್ ತೆರಯಲಾಗುತ್ತಿದೆ. ಈ ಮೂಲಕ ಪ್ರಥಮ ಸರಕಾರಿ ಮದರ್ಸ್ ಮಿಲ್ಕ್ ಎಂಬ ಪಾತ್ರಕ್ಕೆ ವಾಣಿವಿಲಾಸ ಆಸ್ಪತ್ರೆ ಭಾಜನವಾಗುತ್ತಿದೆ.

ತಾಯಿಯ ಎದೆಹಾಲು ಸಂಗ್ರಹಣೆ ಹೇಗೆ: ಬೇರೆ ತಾಯಂದಿರಿಂದ ಸಂಗ್ರಹಿಸುವ ಎದೆಹಾಲನ್ನು ಸೂಕ್ತ ಪರೀಕ್ಷೆಗೆ ಒಳಪಡಿಸಬೇಕಾಗುತ್ತೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇದು ಬಹುಮುಖ್ಯ. ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸಿದ ನಂತರ ಸುಮಾರು 62.05 ಡಿಗ್ರಿ ಉಷ್ಣಾಂಶದಲ್ಲಿ ಕುದಿಸಿ ಪ್ಯಾಕ್ ಮಾಡಲಾಗುತ್ತೆ. ಬಳಿಕ ಈ ಹಾಲನ್ನು 20 ಡ್ರಿಗಿ ಸೆಲ್ಸಿಯೆಸ್ಸ್‌ನಲ್ಲಿ ಇಡಲಾಗುತ್ತೆ. ಗರಿಷ್ಠ 2 ತಿಂಗಳ ಕಾಲ ಎದೆಹಾಲನ್ನು ಸಂಗ್ರಹಿಸಬಹುದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬ್ಲಡ್ ಬ್ಯಾಂಕ್‌ನಂತೆಯೇ ಸರಕಾರಿ ಮದರ್ಸ್ ಮಿಲ್ಕ್ ಬ್ಯಾಂಕ್ ಕೂಡ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News