ಅಂಗಡಿಗಳ ತೆರವು: ಬಿಬಿಎಂಪಿ ಕ್ರಮಕ್ಕೆ ಇಂದಿರಾನಗರ ಮಾಲಕರ ಸಂಘ ವಿರೋಧ

Update: 2019-01-12 16:09 GMT

ಬೆಂಗಳೂರು, ಜ.12: ಇಂದಿರಾನಗರದ ವಸತಿ ಪ್ರದೇಶದಲ್ಲಿರುವ ದಿನನಿತ್ಯ ಗೃಹ ಬಳಕೆಯ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ಇಂದಿರಾನಗರ ಮಾಲಕರು ವ್ಯಾಪಾರಿಗಳು ಮತ್ತು ನಿವಾಸಿಗಳ ಕ್ಷೇಮಾಭ್ಯುದಯ ಸಂಘ ವಿರೋಧಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಆದಿತ್ಯ ಮಾತನಾಡಿ, ಇಂದಿರಾನಗರದಲ್ಲಿ ವರ್ಷಕ್ಕೆ 3 ರಿಂದ 5 ಲಕ್ಷ ರೂ. ವರಮಾನವಿದೆ. ಇಲ್ಲಿಂದ ನಮ್ಮನ್ನು ತೆರವುಗೊಳಿಸಿದರೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ. ಕೋರ್ಟ್ ನೀಡಿರುವ ಮಾರ್ಗಸೂಚಿ ಇಡೀ ಬೆಂಗಳೂರಿಗೆ ಅನ್ವಯವಾಗುತ್ತದೆ. ಆದರೆ ಅದನ್ನು ಇಂದಿರಾನಗರಕ್ಕೆ ಮಾತ್ರವೇ ಬಿಬಿಎಂಪಿ ಅನ್ವಯಿಸಿರುವುದು ಏಕೆ? ಎಂದು ಪ್ರಶ್ನಿಸಿದರು.

ಇಂದಿರಾನಗರದ ನಿವಾಸಿಗಳಿಗೆ ದೈನಂದಿನ ಅಗತ್ಯವಾದ ವಸ್ತುಗಳನ್ನು ಪೂರೈಕೆ ಮಾಡುವ ಮಳಿಗೆಗಳನ್ನು ತೆರೆಯಲಾಗಿದೆ. ಇಂದಿರಾನಗರದ ವಸತಿ ಪ್ರದೇಶಕ್ಕೆ ತೊಂದರೆಯಾಗುತ್ತಿದೆ ಎಂದು ದೈನಂದಿನ ಬಳಕೆಯ ವಸ್ತುಗಳ ವ್ಯಾಪಾರ ನಡೆಸುವವರನ್ನು ವಾಣಿಜ್ಯ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ಸೇರಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಲಯ ನೀಡಿರುವ ಮಾರ್ಗಸೂಚಿಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ಸತತವಾಗಿ 4 ವರ್ಷಗಳಿಂದ ಇಂದಿರಾನಗರದಲ್ಲಿರುವ ಅಂಗಡಿಗಳನ್ನು ಮತ್ತು ಕಚೇರಿಗಳನ್ನು ಮುಚ್ಚಬೇಕೆಂದು ನೋಟಿಸ್ ನೀಡುತ್ತಿದೆ. ವಾಣಿಜ್ಯ ಚಟುವಟಿಕೆಗಳ ಮಾರ್ಗಸೂಚಿಯಡಿ ಕ್ಲಬ್, ಪಬ್, ಮಾಲ್ ಇಂತಹವುಗಳು ಬರಲಿವೆ. ನ್ಯಾಯಾಲಯ ನೀಡಿರುವ ಮಾರ್ಗಸೂಚಿಯನ್ನು ಬಿಬಿಎಂಪಿ ಇನ್ನೊಮ್ಮೆ ಸರಿಯಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ನಾವುಗಳು ಕಳೆದ 30-40 ವರ್ಷಗಳಿಂದ ಇಂದಿರಾನಗರದಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದೇವೆ. ನಾವು ಕೂಡ ಇಲ್ಲಿನ ನಿವಾಸಿಗಳೇ ಆಗಿದ್ದೇವೆ. ನಾವು ನಡೆಸುತ್ತಿರುವ ಅಂಗಡಿಗಳು ವಾಣಿಜ್ಯ ಚಟುವಟಿಕೆಗಳ ಅಡಿಯಲ್ಲಿ ಬರುವುದಿಲ್ಲ. ಇವು ದೈನಂದಿನ ಗೃಹ ಬಳಕೆಗೆ ಅಗತ್ಯವಾದ ವಸ್ತುಗಳಾಗಿವೆ. ಹೀಗಾಗಿ ಬಿಬಿಎಂಪಿ ನಮ್ಮನ್ನು ಅಲ್ಲಿಂದ ತೆರವುಗೊಳಿಸಬಾರದು ಎಂದರು.

ಇಂದಿರಾನಗರದಲ್ಲಿ ಕಳೆದ 20-30 ವರ್ಷಗಳಿಂದ ನೆಲೆಸಿರುವ ಸಣ್ಣ ಅಂಗಡಿಗಳು, ಕಚೇರಿಗಳನ್ನು ತೆರವುಗೊಳಿಸಿದರೆ ಅವರಿಗೆ ಬೇರೆ ಕಡೆಗಳಲ್ಲಿ ಜೀವನ ಕಟ್ಟಿಕೊಳ್ಳಲು ಸರಕಾರ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು. ಇಂದಿರಾನಗರದಲ್ಲಿ ವರ್ಷಕ್ಕೆ 3 ರಿಂದ 5 ಲಕ್ಷ ರೂ. ವರಮಾನವಿದೆ. ಇಲ್ಲಿಂದ ನಮ್ಮನ್ನು ತೆರವುಗೊಳಿಸಿದರೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ. ಕೋರ್ಟ್ ನೀಡಿರುವ ಮಾರ್ಗಸೂಚಿ ಇಡೀ ಬೆಂಗಳೂರಿಗೆ ಅನ್ವಯವಾಗುತ್ತದೆ. ಆದರೆ ಅದನ್ನು ಇಂದಿರಾನಗರಕ್ಕೆ ಮಾತ್ರವೇ ಬಿಬಿಎಂಪಿ ಅನ್ವಯಿಸಿರುವುದು ಯಾಕೆ? ಇಂದಿರಾನಗರದಲ್ಲಿ ಕಳೆದ 20-30 ವರ್ಷಗಳಿಂದ ನೆಲೆಸಿರುವ ಸಣ್ಣ ಅಂಗಡಿಗಳು, ಕಚೇರಿಗಳನ್ನು ತೆರವುಗೊಳಿಸಿದರೆ ಅವರಿಗೆ ಬೇರೆ ಕಡೆಗಳಲ್ಲಿ ಜೀವನ ಕಟ್ಟಿಕೊಳ್ಳಲು ಸರಕಾರ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು. ಕಳೆದ 30 ವರ್ಷದಿಂದ ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಕಂದಾಯವನ್ನು ವಾಣಿಜ್ಯ ಚಟುವಟಿಕೆಗಳ ತೆರಿಗೆ ಅಡಿಯಲ್ಲಿ ಪಾವತಿಸಲಾಗಿದೆ. ಅಲ್ಲದೆ, ಕಳೆದ ಮೂರು ವರ್ಷಗಳ ಹಿಂದಿನ ಇಲ್ಲಿನ ವ್ಯಾಪಾರಸ್ಥರಿಗೆ ವ್ಯಾಪರ ಪರವಾನಗಿ ನೀಡಿದ್ದಿರಿ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News