ಬಡವರಿಗೆ ಉಚಿತ ಆಂಜಿಯೋಪ್ಲಾಸ್ಟಿ ಶಿಬಿರ ನಡೆಸುತ್ತಿರುವ ಬೆಂಗಳೂರಿನ ಹೃದ್ರೋಗ ತಜ್ಞ

Update: 2019-01-26 10:05 GMT

ಬೆಂಗಳೂರು, ಜ. 26:  ನಗರದ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ ಕಿರೋಣ್ ವರ್ಗೀಸ್ ಅವರು  ಬಡ ರೋಗಿಗಳಿಗೆ ಅನುಕೂಲವಾಗಲೆಂದು ಜನವರಿ 15ರಿಂದ ಫೆಬ್ರವರಿ 15ರ ತನಕ  ಉಚಿತ ಆಂಜಿಯೋಪ್ಲಾಸ್ಟಿ ಶಿಬಿರ ನಡೆಸುತ್ತಿದ್ದಾರೆ. ತಮ್ಮ ಈ ಸೇವಾ ಕೈಂಕರ್ಯಕ್ಕಾಗಿ ಅವರು ತಮ್ಮ ಸ್ನೇಹಿತರು ಹಾಗೂ ಹಿತೈಷಿಗಳಿಂಧ ಹಣ ಸಂಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ರೂ. 1 ಲಕ್ಷದಿಂದ 2 ಲಕ್ಷ ವೆಚ್ಚವಾಗುತ್ತದೆ.  ಇಷ್ಟೊಂದು ಹಣ ಹೊಂದಿಸುವುದು ಅಸಾಧ್ಯವಾದ ಬಡವರಿಗೆ ಮುಖ್ಯವಾಗಿ ಯುವ ರೋಗಿಗಳಿಗೆ ಹಾಗೂ ಕುಟುಂಬಗಳ  ಏಕೈಕ ಆಧಾರಸ್ಥಂಭವಾಗಿರುವವರಿಗೆ ಆದ್ಯತೆ ನೀಡಿ ಅವರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ತುರ್ತಾಗಿ ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೂ ಆದ್ಯತೆ ನೀಡಲಾಗುತ್ತಿದೆ.

ಡಾ. ವರ್ಗೀಸ್ ಅವರ ಈ ಉದಾತ್ತ ಕಾರ್ಯ ಜನಮನ ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News