ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಸಾಹಿತಿಗಳಿಗಿದೆ: ನ್ಯಾ.ಅರವಿಂದ ಕುಮಾರ್

Update: 2019-01-27 15:02 GMT

ಬೆಂಗಳೂರು, ಜ.27: ಸಾಹಿತಿಗಳು ದೇಶದ ಮುಕುಟಗಳಿದಂತೆ ಅವರು ಇಡೀ ದೇಶದ ದಿಕ್ಸೂಚಿಯನ್ನೇ ಬದಲಿಸುವ ಅಗಾಧ ಶಕ್ತಿಯನ್ನು ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.

ರವಿವಾರ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಪ್ರತಿಭಾಸಂಪನ್ನರು ಭಾಗ-8’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟದಲ್ಲಿ ಹೆಚ್ಚಾಗಿ ಮುಂಚೂಣಿ ಯಲ್ಲಿದ್ದವರು ಸಾಹಿತಿಗಳು ಮತ್ತು ವಕೀಲರು. ಇವರಿಬ್ಬರ ಕೊಡುಗೆ ಸ್ವಾತಂತ್ರ ಸಂಗ್ರಾಮಕ್ಕೆ ಮಹತ್ತರವಾಗಿದು,್ದ ದೇಶದ ಗತಿ ಬದಲಾಯಿಸುವ ಶಕ್ತಿ ಅವರಲ್ಲಿದೆ ಎಂದು ತಿಳಿಸಿದರು.

ಒಂದು ರಾಷ್ಟ್ರ ತಲೆ ಎತ್ತಿ ನಿಲ್ಲಲು ಶೈಕ್ಷಣಿಕ ಕ್ರಾಂತಿ ಬಹಳ ಮುಖ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಬೇಕು. ಪ್ರಸ್ತುತ ಶಾಲೆಗಳಲ್ಲಿ ಅನುತ್ತೀರ್ಣ (ನಪಾಸ್) ಎನ್ನುವ ಶಬ್ದವೇ ಇಲ್ಲ. ಹೀಗಾದರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದಿಲ್ಲ. ಆತ್ಮಸ್ಥೈರ್ಯವೂ ಕುಂಠಿತವಾಗುತ್ತದೆ ಎಂದು ಹೇಳಿದರು. ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, ಸಮಾಜದಲ್ಲಿ ನಿರ್ದಿಷ್ಟ ಗುರಿ, ಉದ್ದೇಶ ಇಟ್ಟುಕೊಂಡು ಕಾರ್ಯ ಮಾಡುವುದಲ್ಲ. ಪ್ರೀತಿಯಿಂದ ಜನಹಿತ ದೃಷ್ಠಯಿಂದ ಕಾರ್ಯ ಮಾಡುತ್ತಿರುತ್ತಾರೆ ಅಂಥವರನ್ನು ಗುರುತಿಸಿ ಗೌರಸುವಂತಹ ಕಾರ್ಯವಾಗಬೇಕು.ಅಲ್ಲದೆ, ಸಂಘ, ಸಂಸ್ಥೆಗಳು ಕೇವಲ ಬರಹಗಾರರನ್ನು ಮಾತ್ರ ಗುರುತಿಸಿ ಗೌರಸಲು ಸೀಮಿತವಾಗಬಾರದು. ಸಮಾಜದ ಎಲ್ಲ ವರ್ಗಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಎಸ್.ದಿವಾಕರ್, ಪ್ರೊ.ಲಕ್ಷ್ಮೀ ಚಂದ್ರಶೇಖರ್, ಕೃಷ್ಣ ಸೇರಿ ಹನ್ನೆರಡು ಜನ ಹಿರಿಯ ಸಾಧಕರನ್ನು ಸನ್ಮಾನಿಸಿ ಗೌರಸಲಾಯಿತು. ಡಾ.ವಿಜಯಾ, ಡಾ.ನಾ.ಗೀತಾಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News